ಕಬಕ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಹಾಗೂ ಮಾದಕ ವ್ಯಸನ ದುಷ್ಪರಿಣಾಮ ಬಗ್ಗೆ ಮಾಹಿತಿ

0

ಕಬಕ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇಲ್ಲಿ ದಿನಾಂಕ ಆಗಸ್ಟ್ 1ರಂದು ಮಾನವ ಕಳ್ಳ ಸಾಗಾಣಿಕೆ ತಡೆ ಹಾಗೂ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಧಿಕಾರಿಯವರ ಆಶಯದೊಂದಿಗೆ ಪ್ರತಿ ವಿದ್ಯಾಸಂಸ್ಥೆಯವರು ಈ ದಿನವನ್ನು ಕಡ್ಡಾಯವಾಗಿ ಆಚರಿಸುವಂತೆ ಆದೇಶ ನೀಡಿರುತ್ತಾರೆ.ಪುತ್ತೂರು ನಗರ ಠಾಣಾಧಿಕಾರಿಯಾಗಿರುವ ಶ್ರೀಕಾಂತ್ ರಾಥೋಡ್ ಅವರು ಮಾನವ ಕಳ್ಳ ಸಾಗಣಿಕೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಸೊದಾರಣಾವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಶ್ರೀಧರ ರೈ .ಕೆ ವಹಿಸಿದ್ದರು ವನಿತ.ಕೆ ಜೀವಶಾಸ್ತ್ರ ಉಪನ್ಯಾಸಕಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.ಕಬಕ ಗ್ರಾಮ ಪಂಚಾಯತ್ತನ ಮಾಜಿ ಸದಸ್ಯ ಶಾಬಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.ಅರ್ಥಶಾಸ್ತ್ರ ಉಪನ್ಯಾಸಕಿ ಕುಮಾರಿ ಸುಶ್ಮಿತಾ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ವಿಜೇತಾ, ನಯನಕುಮಾರಿ, ಶೋಭಾ,ಕು. ಚಂದ್ರಿಕಾ ,ಬೋಧಕೇತರ ಸಿಬ್ಬಂದಿ ಶ್ರೀಮತಿ ಮಮತಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here