ಪುತ್ತೂರು: ‘ಮಕ್ಕಳ ಮೂಲಕ ಪೋಷಕರಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದ ಪ್ರಾತ್ಯಕ್ಷಿತಗೊಂಡ ವಿಜ್ಞಾನದ ದೈನಂದಿನ ಬದುಕಿಗೆ ಸಂಬಂಧಿಸಿದ ಪ್ರಯೋಗಗಳು ನಮಗೂ ಕೆಲವಾರು ವಿಷಯಗಳನ್ನು ತಿಳಿಸಿದುವು. ಮಕ್ಕಳ ಪ್ರಯತ್ನ ಶ್ಲಾಘನೀಯ’ – ಆಶಾ
ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದ ವಿಭಾಗವಾರು ಪೋಷಕರ ಸಭೆ ನಡೆಯಿತು. ಪೋಷಕರೊಂದಿಗೆ ನಡೆದ ಸಂವಾದದಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪ್ರತೀ ವಿಭಾಗದಿಂದ ಶಾಲಾ ಶಿಕ್ಷಕ-ರಕ್ಷಕ ಸಮಿತಿ, ಮಾತೃಭಾರತಿ, ಅನ್ನಪೂರ್ಣ ಸಮಿತಿ ಹಾಗೂ ವಿವೇಕ ಸಂಜೀವಿನಿ ಸಮಿತಿಗಳಿಗೆ ಇಬ್ಬರು ಪೋಷಕರನ್ನು ಆಯ್ಕೆ ಮಾಡಲಾಯಿತು. ‘ಸಮಿತಿ ಸಮನ್ವಯ’ ಸಭೆಯಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಇವರು ಮಾತನಾಡಿ’ಶಾಲೆಗಳಲ್ಲಿ ಪೋಷಕರ ಪಾತ್ರ ಮಹತ್ತರವಾದುದು.ಒಬ್ಬ ವ್ಯಕ್ತಿತನಗೆ ಸಂಬಂಧಿಸಿದ ಸಂಸ್ಥೆಯನ್ನು, ವಿಷಯವನ್ನುತನ್ನದೆಂದು ಭಾವಿಸಿಕೊಳ್ಳಬೇಕು.ಆಗ ಮಾತ್ರ ಕೆಲಸ ಮಾಡಲು ಮನಸ್ಸು ಶಕ್ತಿ ಬರುತ್ತದೆ.ಸಂಸ್ಥೆಯ ಬೆಳವಣಿಗೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟುದುಡಿಯಬೇಕು.ಜವಾಬ್ದಾರಿಯಿಂದ ವಿಮುಖರಾಗಬಾರದು.ಸಂಘಟನಾತ್ಮಕವಾಗಿ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು’.ಎಂದರು.
ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಜಯಂತಗೌಡ ಕೆ, ಉಪಾಧ್ಯಕ್ಷ ಆಶಾ.ಕೆ, ಜೊತೆ ಕಾರ್ಯದರ್ಶಿಗಳಾಗಿ ಯುವರಾಜ ಕೆ ಆಯ್ಕೆಯಾದರು. ಮಾತೃ ಭಾರತಿ ಅಧ್ಯಕ್ಷೆಯಾಗಿ ಮಂಗಳ ಗೌರಿ, ಉಪಾಧ್ಯಕ್ಷೆಯಾಗಿ ಪ್ರೀತಿಕಲಾ, ಜೊತೆ ಕಾರ್ಯದರ್ಶಿಗಳಾಗಿ ಮಂಜುಳಾ ಆಯ್ಕೆಯಾದರು.ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರಮೇಶ್ ಪಜಿಮಣ್ಣು ಉಪಸ್ಥಿತರಿದ್ದು ಸಂಸ್ಥೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.ನೂತನವಾಗಿ ಆಯ್ಕೆಯಾದ ಎರಡೂ ಸಮಿತಿಗಳ ಅಧ್ಯಕ್ಷರು ಸಾಂದರ್ಭಿಕ ನುಡಿಗಳನ್ನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ಚಂದ್ರ ವಹಿಸಿ ಸರ್ವರ ಸಹಕಾರವನ್ನು ಕೋರಿದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವು ನಡೆಸಿಕೊಟ್ಟರು. ವೇದಿಕೆಯಲ್ಲಿ ವಿವೇಕ ಸಂಜೀವಿನಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಮಾತೃ ಭಾರತಿಯ ನಿಕಟಪೂರ್ವ ಅಧ್ಯಕ್ಷೆ ಉಷಾ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ವಿವೇಕ ಸಂಜೀವಿನಿ ಸಮಿತಿಯ ಸಂಯೋಜಕಿ ವೀಣಾ ಸರಸ್ವತಿ,ಅನ್ನಪೂರ್ಣ ಸಮಿತಿ ಸಂಯೋಜಕಿ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾಸರಸ್ವತಿ ಪ್ರಾರ್ಥಿಸಿ, ರಾಮ ನಾಯ್ಕ್ ಎಂ ಸ್ವಾಗತಿಸಿ, ಉಮಾ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.