ಬಡಗನ್ನೂರು: ಕೊಯಿಲ ಶಾಲಾ ಪೋಷಕರ ಸಭೆ – ಎಸ್‌ ಡಿಎಂಸಿ ರಚನೆ

0

ಬಡಗನ್ನೂರು: ಬಡಗನ್ನೂರಿನ ಕೊಯಿಲ ಸ.ಹಿ.ಪ್ರಾ.ಶಾಲೆ ಇದರ ಪೋಷಕರ ಸಭೆಯು ಗ್ರಾ.ಪಂ.ಸದಸ್ಯೆ ಸುಶೀಲ ವೆಂಕಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಎಸ್‌ ಡಿ ಎಂಸಿ ಅಧ್ಯಕ್ಷರಾಗಿ ಸತೀಶ್ ಚಂದು ಕೂಡ್ಲು ಮತ್ತು ಉಪಾಧ್ಯಕ್ಷರಾಗಿ  ನಯನ ಜೆ ರೈ ಬಡಕ್ಕಾಯೂರು ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸದಸ್ಯರಾಗಿ ಗೀತಾ, ಲಲಿತ, ಗೀತಾ ಚಿತ್ರಾವತಿ, ಶಕೀನಾ, ಫ್ರೆಡ್ರಿಕ್ ಡಿ ಸೋಜಾ, ಸಿ.ಕೆ ಅಹ್ಮದ್ ಕುಂಞಿ, ಬುಶ್ರಾ, ಖದೀಜಾ,ಎನ್ ಎ ಸಿದ್ದಿಕ್ , ಅಬ್ದುಲ್ ಹಮೀದ್,  ಶರ್ಮಿಳಾ,  ಲತಾ ಕುಮಾರಿ, ಪ್ರಕಾಶ್ ರೈ, ಸುಧಾ, ಪುಷ್ಪಾವತಿ ಅವರನ್ನು ಆಯ್ಕೆ ಮಾಡಲಾಯಿತು.

ನಾಮನಿರ್ದೇಶಿತ ಸದಸ್ಯರಾದ ಗ್ರಾ.ಪಂ ಸದಸ್ಯೆ ಸುಶೀಲ ವಿ.ಪಿ, ಆರೋಗ್ಯ ಕಾರ್ಯಕರ್ತೆ ನಂದಿನಿ,  ಅಂಗನವಾಡಿ ಕಾರ್ಯಕರ್ತೆ ಹೇಮಾವತಿ,  ವಿದ್ಯಾರ್ಥಿ ನಾಯಕ ಪ್ರಿನ್ಸನ್ ಲಾಯ್ ಡಿ ಸೋಜಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಎಂ.ಬಿ ಇವರ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಶಿಕ್ಷಕರಾದ ಗಿರೀಶ್ ,ಅತಿಥಿ ಶಿಕ್ಷಕರಾದ ಸರಳ, ಜ್ಞಾನ ದೀಪ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.

LEAVE A REPLY

Please enter your comment!
Please enter your name here