*ವಜ್ರಾಭರಣ ಕ್ಯಾರೆಟ್ ಮೇಲೆ ರೂ.೫ ಸಾವಿರದ ತನಕ ರಿಯಾಯಿತಿ
*ಆಭರಣಗಳ ಅಪೂರ್ವ ಸಂಗ್ರಹ
ಪುತ್ತೂರು:ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಪುತ್ತೂರು ಹಾಗೂ ಸುಳ್ಯ ಚಿನ್ನಾಭರಣ ಮಳಿಗೆಗಳಲ್ಲಿ ಆಗಸ್ಟ್ 7ರಿಂದ 15ರವರೆಗೆ ಆಟಿ ಸೇಲ್' ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಪುತ್ತೂರು ಮತ್ತು ಸುಳ್ಯ ಮಳಿಗೆಯಲ್ಲಿ ಈ
ಆಟಿ ಸೇಲ್’ನ ಕೊಡುಗೆಯಾಗಿ ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರೆಟ್ ಮೇಲೆ ರೂ.5,000ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂಗೆ ರೂ.2,೦೦೦ ರಿಯಾಯಿತಿ ಇದೆ.ಪುತ್ತೂರಿನಲ್ಲಿ 6,೦೦೦ ಚದರಡಿ ಬಹುಮಹಡಿ ಮಳಿಗೆಯಲ್ಲಿ ಝಗಮಗಿಸುವ ವಿನೂತನ ಶೈಲಿಯ ಚಿನ್ನಾಭರಣಗಳ ಶ್ರೇಣಿ ಗ್ರಾಹಕರನ್ನು ಆಕರ್ಷಿಸುತ್ತಿದೆ.ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ಗಳು, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಅಪೂರ್ವ ಸಂಗ್ರಹ ಇಲ್ಲಿದೆ. ವಿಶಾಲವಾದ ವಾಹನ ಪಾರ್ಕಿಂಗ್, ಸಿಬ್ಬಂದಿಗಳಿಂದ ನಗುಮೊಗದ ಸೇವೆ, ಸಂಪೂರ್ಣ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕಾ ವೆಚ್ಚ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ವೈಶಿಷ್ಟ್ಯ.ಎಲ್ಲಾ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇಲ್ಲಿದೆ.ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಆಭರಣಗಳ ಆರಾಮದಾಯಕ ಆಯ್ಕೆಗಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ.ಗ್ರಾಹಕರ ಅನುಕೂಲಕ್ಕಾಗಿ ಪುತ್ತೂರು ಮಳಿಗೆ ಭಾನುವಾರಗಳಂದು ಕೂಡಾ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಯುಐಡಿ ಮುದ್ರಿತ ಆಭರಣಗಳು
ಸಾಮಾನ್ಯ ಗ್ರಾಹಕನಿಗೂ ಚಿನ್ನಾಭರಣಗಳ ಶುದ್ಧತೆ, ತೂಕ ಮತ್ತು ಮೂಲವನ್ನು ನೇರವಾಗಿ ತಿಳಿದುಕೊಳ್ಳುವ ಸಲುವಾಗಿ ಭಾರತ ಸರಕಾರ ಜಾರಿಗೊಳಿಸಿದ ಹೆಚ್ಯುಐಡಿ ಮುದ್ರಿತ ಆಭರಣಗಳು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿದೆ. efb ಎಂಬುದು ಎಲ್ಲಾ ಚಿನ್ನದ ಆಭರಣಗಳು 6 ಅಂಕಿಗಳ ಆಲ್ಫಾನ್ಯೂಮೆರಿಕ್ ವಿಶಿಷ್ಟ ಗುರುತಿನ ಕೋಡ್ನ್ನು ಹೊಂದಿರುವುದಾಗಿದೆ. ಸ್ವರ್ಣೋದ್ಯಮದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಆರಂಭದಿಂದಲೂ ಪಾರದರ್ಶಕ ವ್ಯವಹಾರಕ್ಕೆ ಮನಸೋತ ಗ್ರಾಹಕರು ಇಂದಿಗೂ ಜಿ.ಎಲ್.ನಲ್ಲೇ ಚಿನ್ನಾಭರಣ ಖರೀದಿಸಿ ಸಂತೃಪ್ತರಾಗುತ್ತಿದ್ದಾರೆ.