





ಉಪ್ಪಿನಂಗಡಿ: ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿರುವ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ನಡೆಸಿದ ಪಾಪಿಗಳು ಶೀಘ್ರ ಪತ್ತೆಯಾಗಬೇಕು ಹಾಗೂ ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ವತಿಯಿಂದ ಸೋಮವಾರದಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.



ಸಾಮೂಹಿಕ ಪ್ರಾರ್ಥನೆಯ ವೇಳೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಪ್ರಮುಖ ಮಹೇಶ್ ಬಜತ್ತೂರು, ಸಂತೋಷ್ ಕರ್ಲಾಪು , ಕಿಶೋರ್ ನೀರಕಟ್ಟೆ, ಪ್ರಸಾದ್ ಪಚ್ಚಾಡಿ, ಸಂತೊಷ್ ಅಡೆಕ್ಕಲ್, ಜಯರಾಮ, ರವೀಂದ್ರ ಆಚಾರ್ಯ, ಪವಿತ್ ಪಿಲಿಗೂಡು, ಪವನ್ ದುರ್ಗಾಗಿರಿ, ಸಂದೀಪ್ ದುರ್ಗಾಗಿರಿ, ಅಶೋಕ್ ರೆಂಜಾಲ, ಸುಖೇಶ್ ಅಳಕ್ಕೆ, ಸುಖಿತ್ , ರವಿನಂದನ್ ಹೆಗ್ಡೆ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ಹರೀಶ್ ನಾಯಕ್ ನಟ್ಟಿಬೈಲು, ಪ್ರಸಾದ್ ಬಂಡಾರಿ, ಆದೇಶ್ ಶೆಟ್ಟಿ, ಮತ್ತಿತರರು ಭಾಗವಹಿಸಿದ್ದರು.













