ಶ್ರೀರಾಮಕುಂಜೇಶ್ವರ ಪ.ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಜಗತ್ತಿನ ವೇಗವನ್ನು ಬದಲಿಸಿದೆ ಗಣಕಯಂತ್ರಗಳು- ಶ್ಯಾಮ್ ಪ್ರಸಾದ್

ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಉಪನ್ಯಾಸಕರರಾಗಿ ಆಗಮಿಸಿದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮಾತನಾಡಿ “ಗಣಕಯಂತ್ರದ ಆವಿಷ್ಕಾರವು ಮಾನವನ ಕೆಲಸಗಳನ್ನು ಸುಲಭಗೊಳಿಸಿವೆ. ಅದಲ್ಲದೆ ಗಣಕ ವಿಜ್ಞಾನದಲ್ಲಿ ಬಂದಂತಹ ಹೊಸತನಗಳು ಜಗತ್ತು ನಡೆಯುವ ವೇಗವನ್ನ ಹೆಚ್ಚು ಮಾಡಿದೆ.ಇತ್ತೀಚಿನ ಆವಿಷ್ಕಾರಗಳು ಅಂದರೆ ಸಾಮಾಜಿಕ ಜಾಲತಾಣಗಳು, ಅಂತರ್ಜಾಲದಲ್ಲೇ ಸರಕು ಮತ್ತು ಸೇವೆಗಳ ಲಭ್ಯತೆ, ಕೃಷಿ, ಕಲಿಕೆಗೆ ಸಂಬಂಧಿಸಿದ ಮತ್ತು ಇತ್ಯಾದಿ ವಿಷಯಗಳು ಮಾನವನ ಜೀವನಕ್ಕೆ ಗಣಕಯಂತ್ರಗಳು ಮತ್ತು ಮುಂದುವರಿದ ಭಾಗವಾದ ಅಂತರ್ಜಾಲವು ಬಹಳಷ್ಟು ಮುಖ್ಯವಾಗಿದೆ ಎಂಬುದನ್ನ ತಿಳಿಸುತ್ತದೆ. ಆದರೆ ಈ ಅತ್ಯುನ್ನತ ವ್ಯವಸ್ಥೆಯಲ್ಲಿಯೂ ಕೆಲವೊಂದು ಸಮಸ್ಯೆಗಳಿವೆ. ಹೇಗೆ ಮಾನವನಿಗೆ ಬಹಳ ಉಪಯೋಗವಾಗುವ ಒಂದು ಕಬ್ಬಿಣದ ಸಲಾಕೆಯಿಂದ ಹಿಂಸೆಯನ್ನೂ ಮಾಡಬಹುದೋ, ಅದೇ ರೀತಿ ಈ ಗಣಕಯಂತ್ರದ, ಅಂತರ್ಜಾಲದ ದುಷ್ಪರಿಣಾಮಗಳು ಅನೇಕ ಇದ್ದಾವೆ. ಒಂದರ್ಥದಲ್ಲಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳ ವ್ಯವಸ್ಥೆಯಲ್ಲಿ ಗ್ರಾಹಕನೇ ಮಾರಾಟ ಮಾಡುವ ವಸ್ತುವಾಗಿದ್ದಾನೆ . ಅಂತರ್ಜಾಲವನ್ನು, ಗಣಕಯಂತ್ರಗಳನ್ನು ಮತ್ತು ಸಂಚಾರಿ ವಾಣಿಗಳನ್ನು ಬಳಕೆ ಮಾಡುವ ಜನರು ಜಾಗರೂಕತೆಯಿಂದ ಬಳಕೆ ಮಾಡಿದರೆ ಈ ಪರಿಸ್ಥಿತಿಯು ಬರಲಾರದು. ಹಾಗಾಗಿ ನೀವೆಲ್ಲರೂ ಕೂಡ ಜಾಗರೂಕತೆಯಿಂದ, ಎಷ್ಟು ಬೇಕೋ ಅಷ್ಟೇ ಅಂತರ್ಜಾಲವನ್ನು ಬಳಕೆ ಮಾಡುತ್ತಾ ಅದರ ಸದ್ಬಳಕೆಯನ್ನ ಮಾಡಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್ಎಸ್ಎಸ್ ಯೋಜನೆಯ ಯೋಜನಾಧಿಕಾರಿ ತಿಲಕಾಕ್ಷ ಅಧ್ಯಕ್ಷಿಯ ನುಡಿದರು. ಏನ್ ಎಸ್ ಎಸ್ ನಾಯಕ ಧನರಾಜ್ ಸ್ವಾಗತಿಸಿ, ಎನ್ಎಸ್ಎಸ್ ನಾಯಕಿ ಸಮೀಕ್ಷಾ ವಂದಿಸಿ, ಎನ್ ಎಸ್ ಎಸ್ ಸಹ ಯೋಜನಾಧಿಕಾರಿ ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here