ದರ್ಬೆ: ಬುಕ್ ಪಾಯಿಂಟ್ ಶುಭಾರಂಭ

0

ಪುತ್ತೂರು: ಸ್ಟೇಷನರಿ ವಸ್ತುಗಳನ್ನೊಳಗೊಂಡ ಬುಕ್ ಪಾಯಿಂಟ್ ದರ್ಬೆ ಮುಖ್ಯ ರಸ್ತೆಯಲ್ಲಿ ಆ.10ರಂದು ಶುಭಾರಂಭಗೊಂಡಿತು.
ಸರಕಾರಿ ವೈದ್ಯೆ ಡಾ.ಚೈತ್ರಾ ಮತ್ತು ಅವರ ಪತಿ ಡಾ.ಸುಶಾಂತ್ ಎಸ್.ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಚೈತ್ರಾ ಅವರು, ಬೆಳೆಯುತ್ತಿರುವ ಈ ಪರಿಸರಕ್ಕೆ ಇಂತಹ ಮಳಿಗೆಗಳು ಅವಶ್ಯಕವಾಗಿದ್ದು ಸ್ಥಳೀಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತವಾದ ಮಳಿಗೆಯಾಗಿದೆ ಎಂದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ, ಡಾ.ಸುಶಾಂತ್ ಎಸ್.ರಾವ್ ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದರ್ಬೆ ಮಹಮ್ಮದೀಯ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಜಾದ್, ಸಿಟಿ ಟೂರ್‍ಸ್ ಆಂಡ್ ಟ್ರಾವೆಲ್ಸ್‌ನ ಮಾಲಕ ಬಿ.ಎ.ಶಕೂರ್ ಹಾಜಿ ಕಲ್ಲೇಗ, ಎಸ್‌ಪಿಸಿ ಕ್ಯಾಂಟೀನ್ ಮಾಲಕ ಆನಂದ ಶೆಟ್ಟಿ, ಸುಜಾತ ಬಾರ್ ಆಂಡ್ ರೆಸ್ಟೋರೆಂಟ್‌ನ ಮಾಲಕ ಸುಶಾಂತ್ ಶೆಟ್ಟಿ, ಆಶಿತಾ ಸುಶಾಂತ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಸೂರಜ್ ಶೆಟ್ಟಿ ಸಾಮೆತ್ತಡ್ಕ, ಅಬ್ದುಲ್ ರಜಾಕ್ ಕತ್ತಾರ್, ಇಬ್ರಾಹಿಂ ಕುನಿಲ್, ಅಬ್ದುಲ್ ರಹಮಾನ್ ಕಬಕ, ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ಶೆಟ್ಟಿ, ಪಿ.ವಿ.ಕೃಷ್ಣನ್ ದರ್ಬೆ, ಸುರಯ್ಯ ಡ್ರೆಸ್‌ನ ಮಾಲಕ ಅಬ್ದುಲ್ ಖಾದರ್ ಹಾಜಿ, ಕಾರ್ತಿಕ್ ಮೆಡಿಕಲ್‌ನ ಮಾಲಕ ವೇಣುಗೋಪಾಲ ರಾವ್, ರೋಶನ್, ಎಲ್ಯಾಸ್ ಪಿಂಟೋ, ಮಂಗಳೂರು ಫರ್ನಿಚರ್‍ಸ್ ಮಾಲಕ ಇಸ್ಮಾಯಿಲ್ ಕೂರ್ನಡ್ಕ, ನಂದಿನಿ ಹಂಝ, ಅಬ್ದುಲ್ ರಜಾಕ್ ಆರ್.ಪಿ, ಆಲಿ ಕುಂಞಿ, ರಫೀಕ್ ನಂದಿನಿ, ಅಬ್ದುಲ್ ಹಮೀದ್ ಸೋಂಪಾಡಿ, ಹನಿಫ್ ನಂದಿನಿ, ಶುಭಂ ಕ್ಯಾಟರರ್‍ಸ್ ಮಾಲಕ ಸುಜೀತ ಶೆಟ್ಟಿ ಮೈಸೂರು, ಬಾಲಕೃಷ್ಣ ಶೆಟ್ಟಿ ದರ್ಬೆ, ಸಂಗಮ್ ಹೊಟೇಲ್ ಮಾಲಕ ಅಬ್ದುಲ್ ರಹೀಮ್, ಲತೀಪ್ ದರ್ಬೆ, ಬಶೀರ್ ದರ್ಬೆ, ಸಿಯಾನ್ ದರ್ಬೆ, ನ್ಯಾಯವಾದಿ ಸಾಹಿರಾ ಜುಬೈರ್, ಸೂರಾಜ್ ನಾಯರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ದರ್ಬೆ ಮಸೀದಿಯ ಖತಿಬ್ ಕರೀಮ್ ದಾರಿಮಿಯವರು ದುವಾ ಆಶೀರ್ವಚನ ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇರ್ಷಾದ್ ಯಮಾನಿ, ಅನ್ವರ್ ಸ್ವಾದಿಕ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಹನೀಫಿ ಶಾಂತಿನಗರ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅಲ್ತಾಫ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು.

ಬುಕ್ ಪಾಯಿಂಟ್‌ನ ಮಾಲಕ ಅಬ್ದುಲ್ ಅಝೀರh ದರ್ಬೆ ಅವರು ಸ್ವಾಗತಿಸಿ ಮಾತನಾಡಿ, ಇಲ್ಲಿ ಎಲ್ಲಾ ತರದ ಬುಕ್ಸ್, ಸ್ಟೇಷನರಿ ಸಾಮಾಗ್ರಿ, ಗಿಫ್ಟ್ ಐಟಂ ಹಾಗೂ ಇನ್ನಿತರ ಐಟಂಗಳು ದೊರೆಯುತ್ತದೆ. ಜೆರಾಕ್ಸ್ ವ್ಯವಸ್ಥೆಯೂ ಇದೆ ಎಂದು ತಿಳಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here