ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಉಪಾಧ್ಯಕ್ಷರಾಗಿ ಸರೋಜಿನಿ ಕೇಕನಾಜೆ ಆಯ್ಕೆ

0

ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪದ್ಮನಾಭ ಪೂಜಾರಿ ಸಣ್ಣಗುತ್ತು ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಕೇಕನಾಜೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ವಿಟ್ಲ ಸಿ.ಡಿ.ಪಿ.ಒ., ಉಷಾರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ರವರು ಸಹಕರಿಸಿದರು. ಗ್ರಾ.ಪಂ. ಸದಸ್ಯರಾದ ಸರಸ್ವತಿ ಕೆ., ಜಗದೀಶ್ ಶೆಟ್ಟಿ ಮುಳಿಯ, ಸೀತಾರಾಮ ಶೆಟ್ಟಿ ಮುಳಿಯ, ಸದಾಶಿವ ಶೆಟ್ಟಿ ಮಡಿಯಾಲ, ರವೀಶ್ ಕೆ., ಕಾನ ಈಶ್ವರ ಭಟ್, ಸೆಲ್ವಿನಾ ಡಿಸೋಜ, ಬಬಿತಾ ಜೆಡ್ಡು, ಶಾಂಭವಿ ಸುಧಾಕರ್, ಗಿರಿಜಾ ಎನ್, ಭಾಗೀರಥಿ, ಶಶಿಕಲ, ಸುಕುಮಾರ ಉಪಸ್ಥಿತರಿದ್ದರು.


ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ., ಕೆ.ಪಿ.ಸಿ.ಸಿ. ಸದಸ್ಯರಾದ ಎಂ.ಎಸ್. ಮಹಮ್ಮದ್, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ವಿಟ್ಲ – ಉಪ್ಪಿನಂಗಡಿ ವಕ್ತಾರರಾದ ರಮಾನಾಥ ವಿಟ್ಲ, ವಿಟ್ಲ – ಉಪ್ಪಿನಂಗಡಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ , ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ. ಅಶ್ರಫ್, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಟ್ಲ ಶ್ರೀನಿವಾಸ ಶೆಟ್ಟಿ ಕೊಲ್ಯ, ಪ್ರಮುಖರಾದ ರವಿ ಆಲಂಗಾರು, ಸುಶಾಂತ್ ಶೆಟ್ಟಿ, ಲಕ್ಷ್ಮಣ ಪೂಜಾರಿ, ಜನಾರ್ದನ ಪೂಜಾರಿ, ಪ್ರವೀಣ್ ಪೂಜಾರಿ, ಸುಧಾಕರ ಮಡಿಯಾಲ ಮೊದಲಾದವರು ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here