ಪುತ್ತೂರು: ಕೇಪು ಗ್ರಾಮ ಪಂಚಾಯತ್ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ರಾಘವ ಸಾರಡ್ಕ, ಉಪಾಧ್ಯಕ್ಷೆಯಾಗಿ ಹೇಮಾವತಿ ದೇವುಮೂಲೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕೇಪು ಗ್ರಾಮ ಪಂಚಾಯತ್ನ ಒಟ್ಟು 16 ಸದಸ್ಯರ ಪೈಕಿ 13 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 3 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ. ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಬಿಜೆಪಿ ಬೆಂಬಲಿತ ಸದಸ್ಯರಾದ ರಾಘವ ಸಾರಡ್ಕ ಅಧ್ಯಕ್ಷ ಸ್ಥಾನಕ್ಕೆ ಮತ್ತು ಹೇಮಾವತಿ ದೇವುಮೂಲೆ ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಇವರಿಬ್ಬರು ಅವಿರೋಧ ಆಯ್ಕೆಗೊಂಡಿದ್ದಾರೆ.
ಆ.11ರಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾರವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಸದಸ್ಯರಾದ ಕೇಶವ ನಾಯ್ಕ, ಸುಮಿತ್ರಾ ಜೆ. ಪೂಜಾರಿ, ಅಬ್ದುಲ್ ಕರೀಮ್ ಕೆ., ಜಗಜೀವನ್ರಾಮ್ ಶೆಟ್ಟಿ, ಮೋಹಿನಿ, ಪುರುಷೋತ್ತಮ ಕೆ., ವಿಶಾಲಾಕ್ಷಿ ಎಮ್., ಸಂತೋಷ್ ಕುಮಾರ್ ಕೆ., ಧರ್ಮಲತಾ, ಜಯಶೀಲ, ಯಶಸ್ವಿನಿ, ವನಿತಾ ಕುಲಾಲ್, ದಮಯಂತಿ, ಚಂದ್ರಶೇಖರ ಗ್ರಾಮ ಪಂಚಾಯತ್ ಪಿಡಿಒ ಗೋಕುಲ್ದಾಸ್ ಭಕ್ತ, ಕಾರ್ಯದರ್ಶಿ ರಾಮ ನಾಯ್ಕ, ಸಿಬಂದಿಗಳಾದ ಚಂದ್ರಶೇಖರ್, ಸುಧಾಕರ್, ರಮೇಶ್, ಸುರೇಶ್, ಭವ್ಯ ಉಪಸ್ಥಿತರಿದ್ದರು.