ಪ್ರಿಯದರ್ಶಿನಿ ಆ.ಮಾ. ಶಾಲೆಯಲ್ಲಿ ವಿದ್ಯಾಭಾರತಿ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದ.ಕ. ಜಿಲ್ಲೆ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ ಇವುಗಳ ಸಹಯೋಗದೊಂದಿಗೆ ವಿದ್ಯಾಭಾರತಿ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಆ.11 ರಂದು ಬೆಟ್ಟಂಪಾಡಿ ಬಿಲ್ವಗಿರಿ ಕ್ರೀಡಾಂಗಣದಲ್ಲಿ ನಡೆಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಕ್ರೀಡಾಕೂಟದ ಸಮಾರಂಭ ಉದ್ಘಾಟಿಸಿ ಶುಭಹಾರೈಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಸತೀಶ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಧನಂಜಯ ಬಿ.ಸಿ., ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ್ ಆಳ್ವ, ಮುಂಡೂರು ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ಮಂಗಳೂರಿನ ಕಟಿಲೇಶ್ವರೀ ಲಾಜಿಸ್ಟಿಕ್ಸ್ ಮ್ಹಾಲಕ ಜನಾರ್ದನ ಪೂಜಾರಿ ಪದಡ್ಕ, ಹಾಸನ ಸೆಲ್ಕೋ ಸೋಲಾರ್ ಲಿ. ನ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ., ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಸಂಚಾಲಕ ಡಾ.ಸತೀಶ್ ರಾವ್, ವಾಲಿಬಾಲ್ ಪಂದ್ಯಾಟ ನಿರ್ವಹಣಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ರೈ ಬೈಲಾಡಿ, ಕೋಶಾಧಿಕಾರಿ ವರದರಾಯ ನಾಯಕ್ ಪಾಣಾಜೆ, ಸಂಚಾಲಕ ರಾಧಾಕೃಷ್ಣ ರೈ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿದರು. ವಿದ್ಯಾಭಾರತಿ ಜಿಲ್ಲಾ ಕ್ರೀಡಾ ಸಂಯೋಜಕ ಕರುಣಾಕರ ಎಂ.ಎಲ್. ಪ್ರಾಸ್ತಾವಿಕ ಮಾತನಾಡಿದರು. ವಾಲಿಬಾಲ್ ಪಂದ್ಯಾಟ ನಿರ್ವಹಣಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ವಂದಿಸಿದರು.


ಕ್ರೀಡಾಕೂಟಕ್ಕೆ ಚಾಲನೆ: ದ.ಕ. ಜೇನು ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಪ್ಯ ಪೊಲೀಸ್ ಠಾಣಾ ಎಸ್‌ಐ ಬಾಲ್ ಎಸೆಯುವ ಮೂಲಕ ಚಾಲನೆ ನೀಡಿದರು.



ಸನ್ಮಾನ:
ವಾಲಿಬಾಲ್ ಆಟಗಾರ ಗಣೇಶ್ ರೈ ಮತ್ತು ಉತ್ತಮ ಕ್ರೀಡಾ ಸಂಯೋಜಕ ದಾಮೋದರ ಕಜೆಯವರಿಗೆ ಪಂದ್ಯಾಕೂಟದ ವತಿಯಿಂದ ಸನ್ಮಾನ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಆಕರ್ಷಕ ಚೆಂಡೆ ವಾದನ ನಡೆಯಿತು. ಬೆಳಿಗ್ಗೆ ಮತ್ತು ಸಂಜೆ ಉಪಾಹಾರ ಹಾಗೂ ಮಧ್ಯಾಹ್ನ ಸುಮಾರು 1500 ಮಂದಿಗೆ ಭೋಜನ ನಡೆಯಿತು.

LEAVE A REPLY

Please enter your comment!
Please enter your name here