





ಪುಣಚ : ಪುಣಚ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಶೋಧಾ ಬೇಬಿ ಅವರನ್ನು ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಪುಣಚ ಇದರ ವತಿಯಿಂದ ಶ್ರೀದೇವಿ ವಿದ್ಯಾ ಕೇಂದ್ರ ದೇವಿನಗರದ “ಜ್ಞಾನ ಭಾರತಿ” ಸಭಾಂಗಣದಲ್ಲಿ ಆ.12ರಂದು ಸನ್ಮಾನಿಸಲಾಯಿತು.
ತಂಡದ ಗುರುಗಳಾದ ಗಣೇಶ್ ಪಾಲೆಚ್ಚಾರ್ ಅಭಿನಂದಿಸಿ, ಮಾತನಾಡಿ ಅಧ್ಯಕ್ಷರ ಸೇವಾವಧಿಯಲ್ಲಿ ಪುಣಚ ಗ್ರಾಮದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭಹಾರೈಸಿದರು. ತಂಡದ ಸದಸ್ಯೆ ಹಾಗೂ ಶ್ರೀದೇವಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಜನಿಯವರು ಕಲಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಸಹಕಾರ ನೀಡಬೇಕು ಹಾಗೂ ಅವರ ನೇತೃತ್ವದಲ್ಲಿ ಪುಣಚ ಗ್ರಾಮ ಉತ್ತಮ ಮಾದರಿ ಗ್ರಾಮ ಎನ್ನುವ ರೀತಿಯಲ್ಲಿ ಸಾಧನೆಯಗಲಿ ಎಂದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿಯ ಉಷಾ, ವೈಶಾಲಿ, ನಳಿನಿ, ಸವಿತ , ರೇಖಾ, ಶೀತಲ್, ಆದ್ಯಾ, ಧನ್ವಿ ಹಾಗೂ ವಾರುಣಿ ಪಾಲ್ಗೊಂಡಿದ್ದರು.












