ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ 29ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

0

ಮಾನವೀಯ ಮೌಲ್ಯದ ಬದುಕು ನಮ್ಮದಾಗಬೇಕು: ಮಾಣಿಲ ಶ್ರೀ

ವಿಟ್ಲ: ಮಾನವೀಯ ಮೌಲ್ಯದ ಬದುಕು ನಮ್ಮದಾಗಬೇಕು. ಯೋಚಿಸಬೇಕಾದ ಕಾಲಘಟ್ಟವಿದು. ದೇಶ ಭ್ರಮೆಯಲ್ಲಿ ಮುಳುಗಿದೆ. ಭ್ರಮೆಯಿಂದ ಹಿಂದೂ ಸಮಾಜಕ್ಕೆ ಅಪಾಯವಿದೆ. ಹಿಂದಿನ ಪ್ರೀತಿಗೂ ಇಂದಿನ ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಜಗತ್ತಿಗೆ ಬೆಳಕು ಕೊಟ್ಟ ದೇಶ ನಮ್ಮದು.‌ ಸನಾತನ ಹಿಂದೂ ಧರ್ಮ ಜಗತ್ತಿಗೆ ಬೆಳಕು ಕೊಟ್ಟಿದೆ. ದುರಿತ ದುರಂತಕ್ಕೆ ಮೂಲ ಕಾರಣ ಸಂಸ್ಕೃತಿಯ ಕೊರತೆ‌ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ‌ 29ನೇ ದಿನವಾದ ಆ.13ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಉಪಕಾರ ಸ್ಮರಣೆ ನಮ್ಮಲ್ಲಿರಬೇಕು. ನಾವು ಕೃತಜ್ಞರಾಗಿರಬೇಕು. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಪ್ರೀತಿಯಿಂದ ಬಾಳೋಣ. ನಮ್ಮಲ್ಲಿ ಬಾಲಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಸುಸಂಸ್ಕೃತರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ.
ಬಾಲಭೋಜನ ಕಾರ್ಯಕ್ರಮ ಮನೆಮನೆಗಳಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಿದೆ. ದೇಶಪ್ರೇಮ ರಾಷ್ಟ್ರ ಪ್ರೇಮ ನಮ್ಮಲ್ಲಿ ಮೂಡಬೇಕು. ಕೆಟ್ಟದರಲ್ಲಿಯೂ ಒಳ್ಳೆಯದನ್ನು ನೋಡುವ ಮನಸ್ಸು ನಿಮ್ಮದಾಗಲಿ ಎಂದರು.

ಚಿಕ್ಕಮಗಳೂರಿನ ಕನ್ನಡ ಪೂಜಾರಿ
ಹೀರೆಮಗಳೂರು ಕಣ್ಣಣ್ಣ್ ರವರು ಧಾರ್ಮಿಕ ಉಪನ್ಯಾಸ ನೀಡಿ ಶ್ರೀಗಳ ಕೃಪೆಯಿಂದ ಸಂಸ್ಕಾರ ಬರಲು ಸಾಧ್ಯ. ಮನಸ್ಸಿನ ಪರಿಶುದ್ಧತೆ ಇದ್ದರೆ ಉತ್ತಮ ಸಂಸಾರ ನಡೆಯಲು‌ ಸಾಧ್ಯ. ಹಿರಿಯರು ಸಂಸ್ಕಾರವಂತರಾಗಲಗುವ ಮೂಲಕ ಮಕ್ಕಳನ್ನು‌ ಸಂಸ್ಕಾರವಂತರನ್ನಾಗಿ ಮಾಡಿ. ಗುರುಗಳ ಮುಖಾಂತರ ತ್ಯಾಗ, ಸೇವೆ, ಬೋಧನೆ ಆಗುತ್ತದೆ. ಹಣಕ್ಕೆ ಪ್ರಾಧಾನ್ಯತೆ ನೀಡದೆ ಗುಣಕ್ಕೆ ಪ್ರಾಧಾನ್ಯತೆ ನೀಡಿ ಎಂದರು.

ಶಿರಸಿ ಸಿದ್ದಾಪುರದ ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ಕೆ.ಎ. ಭಟ್ , ಪುತ್ತೂರಿನ ಸತ್ಯಸಾಯಿ ಬಳಗದ ಪ್ರಶಾಂತಿ ಸದ್ಭಾವನ ಟ್ರಸ್ಟ್ ನ ಮಧುಸೂದನ ನಾಯಕ್, ಚಿಕ್ಕಮಗಳೂರು ಸರಕಾರಿ ಪಾಲಿಟೆಕ್ನಿಕ್ ನ ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್, ಕುಕ್ಕಾಜೆ ಶ್ರೀ ಕಾಳಿಕಾಂಬ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ
ಅನುರಾಧ ಪಳನೀರು, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here