ನೆಲ್ಯಾಡಿ ಚಾಕೋಟೆಯಲ್ಲಿ ಕಾಡಾನೆ ಹಾವಳಿ

0

ನೆಲ್ಯಾಡಿ: ಶಿವಾರುಮಲೆ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ನೆಲ್ಯಾಡಿ ಗ್ರಾಮದ ಚಾಕೋಟೆಯಲ್ಲಿ ಕಾಡಾನೆ ಹಾವಳಿ ಕಂಡುಬಂದಿದೆ. ಆ.13ರಂದು ರಾತ್ರಿ ಕಾಡಾನೆ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿವೆ.
ಚಾಕೋಟೆ ನಿವಾಸಿ ಮೋಳಿ ಸೈಮನ್, ಸಂತೋಷ್, ಪಿ.ಸಿ.ಜೋಸೆಫ್ ಎಂಬವರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಬಾಳೆಗಿಡ ನಾಶಗೊಳಿಸಿವೆ. ಈ ಭಾಗದಲ್ಲಿ ಸಂಚರಿಸುವ ರಸ್ತೆ ಬದಿಯಲ್ಲಿನ ತಾಳೆಯ ಮರಗಳನ್ನೂ ಉರುಳಿಸಿ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡುಬಂದಿದೆ. ರಸ್ತೆಯಲ್ಲಿ ಆನೆಯ ಲಡ್ಡಿಯೂ ಕಾಣಿಸಿಕೊಂಡಿದೆ. ಶಿವಾರುಮಲೆ ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅಂಬರ್ಜೆ, ಮಾಪಲ, ಮಣ್ಣಮಜಲು ಪ್ರದೇಶಕ್ಕೆ ಈ ಹಿಂದೆ ದಾಳಿ ನಡೆಸಿದ್ದ ಕಾಡಾನೆ ಇದೀಗ ನೆಲ್ಯಾಡಿ ಗ್ರಾಮದ ಚಾಕೋಟೆಯಲ್ಲಿ ಹಾವಳಿ ನಡೆಸಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ರಾತ್ರಿ ವೇಳೆ ಆನೆಗಳು ಕಾಣಿಸಿಕೊಳ್ಳುತ್ತಿದ್ದು , ಜನರು ಭಯಭೀತರಾಗಿದ್ದಾರೆ. ಆನೆ ಹಾವಳಿ ಕಂಡು ಬಂದ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here