ಟೀಂ ದೋಸ್ತಿಲು ಪುಳಿತ್ತಡಿ ಇವರ ವತಿಯಿಂದ ಜಗದೀಶ್ ಪೂಜಾರಿ ಪರಕ್ಕಜೆ ಅವರ ಗದ್ದೆಯಲ್ಲಿ ಕೆಸರ‍್ಡೊಂಜಿ ದಿನ ಕಾರ್ಯಕ್ರಮ

0

ನೆಲ-ಜಲ ರಕ್ಷಿಸುವ ಕಾರ್ಯವಾಗಲಿ – ನಟೇಶ್ ಪೂಜಾರಿ

ಉಪ್ಪಿನಂಗಡಿ: ಕೃಷಿಯೇ ಪ್ರಧಾನವಾಗಿದ್ದ ತುಳುನಾಡಿನಲ್ಲಿ ಪ್ರಾಕೃತಿಕವಾಗಿ ಇಂದು ಮಹತ್ತರ ಬದಲಾವಣೆಗಳಾಗಿವೆ. ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಕೆಸರು ಗದ್ದೆಗಳು ಇಂದು ಕಣ್ಮರೆಯಾಗತೊಡಗಿವೆ. ಇದರೊಂದಿಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು ಮರೆಯಾಗುತ್ತಿವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ನೆಲ-ಜಲವನ್ನು ರಕ್ಷಿಸುವ ಕಾರ್ಯವಾಗಬೇಕಿದೆ ಎಂದು ಸಾಮಾಜಿಕ ಮುಂದಾಳು, ಉದ್ಯಮಿ ನಟೇಶ್ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಟೀಂ ದೋಸ್ತಿಲು ಪುಳಿತ್ತಡಿ ಇವರ ವತಿಯಿಂದ ಆ.13 ರಂದು ಪುಳಿತ್ತಡಿಯಲ್ಲಿ ಜಗದೀಶ್ ಪೂಜಾರಿ ಪರಕ್ಕಜೆ ಅವರ ಗದ್ದೆಯಲ್ಲಿ ನಡೆದ ಕೆಸರ‍್ಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಮೂವತ್ತು ವರ್ಷದ ಹಿಂದೆ ಇದ್ದ ಭೂಮಿಗಳು ಈಗ ಹೇಗಿವೆ ಎಂಬುದನ್ನು ನಾವು ಯೋಚಿಸಬೇಕಿದೆ. ಮಳೆ ನೀರು ಇಂಗಲು ಕಾರಣವಾಗುತ್ತಿದ್ದ ಭತ್ತದ ಗದ್ದೆಗಳು ನಾಶವಾಗಿ ಅಲ್ಲಿ ಅಡಿಕೆ ತೋಟವೋ, ಕಾಂಕ್ರೀಟ್ ಕಟ್ಟಡಗಳೋ ತಲೆಯೆತ್ತಿ ನಿಂತಿವೆ. ಪರಿಸರದಲ್ಲಿದ್ದ ಕೆರೆ, ಬಾವಿಗಳು ಮುಚ್ಚಿ ಹೋಗಿವೆ. ಈ ರೀತಿ ಪ್ರಕೃತಿ ನಾಶದಿಂದ ಭೂಮಿಯ ಅಂತರ್ಜಲ ಕುಸಿದು 600 ಫೀಟ್‌ನಷ್ಟು ಕೊಳವೆ ಬಾವಿ ತೋಡಿದರೂ ನೀರು ಸಿಗದ ಪರಿಸ್ಥಿತಿ ನಮ್ಮದಾಗಿವೆ. ಹಣದ ಹಿಂದೆ ಹೋದ ನಾವು ನಮ್ಮ ಹಿರಿಯರ ಆಚಾರ-ವಿಚಾರಗಳನ್ನು ಮರೆತಿದ್ದೇವೆ. ನಮ್ಮ ಹಿರಿಯರ ಸಂಸ್ಕೃತಿ ಇಂದು ಒಂದು ದಿನದ ಆಚರಣೆಗಷ್ಟೇ ಸೀಮಿತವಾಗಿವೆ. ಆದ್ದರಿಂದ ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿ, ನೆಲ-ಜಲವನ್ನು ಕಾಪಾಡುವ ಪ್ರಯತ್ನ ಮಾಡಬೇಕು ಎಂದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರೈತರು ಹಾಗೂ ಸೈನಿಕರು ಈ ದೇಶದ ಆಸ್ತಿಗಳು. ಇಲ್ಲಿನ ರೈತನ ಬದುಕೇ ನಮ್ಮ ಸಂಸ್ಕೃತಿಯಾಗಿ ಮಾರ್ಪಾಡಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂದಿನ ಯುವ ಜನತೆಗೆ ನಮ್ಮ ಭವ್ಯ ಪರಂಪರೆಯ ಬಗ್ಗೆ ನೆನಪಿಸುವ ಕೆಲಸಬಾಗಬೇಕು ಎಂದರು.

ಟೀಂ ದೋಸ್ತಿಲು ಅಧ್ಯಕ್ಷ ಕಿರಣ್ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಸುಧೀರ್ ಶೆಟ್ಟಿ ಬೆಂಗಳೂರು, ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ದಕ್ಷಿಣ ಕನ್ನಡ ಜಿಲ್ಲಾ ಡಾಜ್ ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ವಿದ್ಯಾಧರ ಜೈನ್, ಕಡಮ್ಮಾಜೆ ಫಾರ್ಮ್ಸ್ನ ಜಯಪ್ರಕಾಶ್ ಡಿ.ಕೆ, ಉದ್ಯಮಿ ಪ್ರತಾಪ್ ಪೆರಿಯಡ್ಕ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಯೊಗೀಶ್ ಪೂಜಾರಿ ಕಡ್ತಿಲ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುನೀಲ್ ಅನಾವು, ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ., ನಿವೃತ ಸೈನಿಕ ರೋಹಿತ್ ಸುಣ್ಣಾಜೆ, ಚಾರ್ವಾಕ ಸಿಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಅಶೋಕ್, ಚಲನಚಿತ್ರ ನಟ ಎಂ.ಕೆ. ಮಠ, ಪ್ರಮುಖರಾದ ವಿಶ್ವನಾಥ ಶೆಟ್ಟಿ ಕಂಗ್ವೆ, ಮುಕುಂದ ಗೌಡ ಬಜತ್ತೂರು, ವೆಂಕಪ್ಪ ಪೂಜಾರಿ ಮರುವೇಲು, ಸತೀಶ್ ಶೆಟ್ಟಿ ಹೆನ್ನಾಳ ಮತ್ತಿತರರು ಆಗಮಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಗಿರೀಶ್ ಆರ್ತಿಲ, ಜಿತೇಶ್ ಕಜೆಕ್ಕಾರು, ಚಂದ್ರಶೇಖರ ಪುಳಿತ್ತಡಿ, ಜಗದೀಶ್ ಕಂಪ, ರಕ್ಷಿತ್ ಶೆಟ್ಟಿ ಕಜೆಕ್ಕಾರು, ನರಸಿಂಹ ಶೆಟ್ಟಿ ಕಜೆಕ್ಕಾರು, ಬಾಲಕೃಷ್ಣ ಗೌಡ ಅತ್ರೆಮಜಲು, ಧರ್ನಪ್ಪ ನಾಯ್ಕ ಬೊಳ್ಳಾವು, ಆಕಾಶ್ ಶೆಟ್ಟಿ ಕಜೆಕ್ಕಾರು, ಸಚಿನ್ ಆಚಾರ್ಯ, ಹೇಮಪ್ರಸಾದ್ ಶೆಟ್ಟಿ, ಮಾಧವ ಕಂಪ, ಕಲಾವತಿ ಪರಕ್ಕಜೆ, ಮುರಳೀಧರ ಆರ್ತಿಲ, ಸುಜಿತ್ ಗೌಡ ಬೊಳ್ಳಾವು, ಪ್ರವೀಣ್ ನೆಡ್ಚಿಲ್, ಹರೀಶ್ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.
ಟೀ ದೋಸ್ತಿಲುವಿನ ಸುನೀಲ್ ಕುಮಾರ್ ದಡ್ಡು ಸ್ವಾಗತಿಸಿದರು. ಸಚಿನ್ ಗೌಂಡತ್ತಿಗೆ ವಂದಿಸಿದರು. ಸುರೇಶ್ ಅತ್ರೆಮಜಲು ಹಾಗೂ ಶ್ರೀನಿವಾಸ ಬೊಳ್ಳಾವು ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರಿಂದಾಗಬೇಕು. ಇದಕ್ಕಾಗಿಯೇ ತುಳುನಾಡ ಜನಪದ ಕ್ರೀಡೆಯಾದ ಕಂಬಳ ಕ್ರೀಡೆಯ ರಾಜ್ಯ ರಾಜಧಾನಿಗೂ ಪರಿಚಯಿಸುವ ಉದ್ದೇಶವಿದ್ದು, ಅಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕೆಲಸಗಳು ನಡೆಯುತ್ತಿವೆ. ವಿಧಾನ ಸಭೆಯಲ್ಲಿಯೂ ತುಳುವಿನಲ್ಲಿ ಮಾತನಾಡಿ ತುಳು ಭಾಷೆಗೆ ಪ್ರಾಧಾನ್ಯತೆ ನೀಡಲು ಒತ್ತಾಯಿಸಿದ್ದೇನೆ. ತುಳು ಭಾಷೆ, ಆಚಾರ-ವಿಚಾರ, ಸಂಸ್ಕೃತಿಯ ಉಳಿವಿಗಾಗಿ ಸದಾ ನಿಮ್ಮೊಂದಿಗಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟನೆಯ ಬಳಿಕ ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗೆ ಹಾಲೆರೆಯಲಾಯಿತು. ಬಳಿಕ ಅಲ್ಲಿ ಇಡಲಾಗಿದ್ದ ಕಾಪುವಿನಲ್ಲಿ ಭಗವಾಧ್ವಜ ಹಾಗೂ ತುಳುನಾಡ ಧ್ವಜವನ್ನು ಪ್ರತಿಷ್ಠಾಪಿಸಲಾಯಿತು. ಆಮೇಲೆ ಸಂಜೆಯವರೆಗೆ ಕೆಸರ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

LEAVE A REPLY

Please enter your comment!
Please enter your name here