ಉಪ್ಪಿನಂಗಡಿ: ತ್ರಿಖಂಡ ಭಾರತವನ್ನು ಮತ್ತೆ ಅಖಂಡಗೊಳಿಸಬೇಕು ಎಂಬ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಆಶ್ರಯದಲ್ಲಿ ಆ.13ರಂದು ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ್, ಬಜರಂಗ ದಳದ ಸಂಚಾಲಕ ಸಂತೋಷ್ ಪೆರಿಯಡ್ಕ, ಪ್ರಮುಖರಾದ ಮುಕುಂದ ಗೌಡ ಬಜತ್ತೂರು, ತಿಮ್ಮಪ್ಪ ಗೌಡ, ಜಯರಾಮ, ಸಂತೋಷ್ ಅಡೆಕ್ಕಲ್, ರವಿನಂದನ್, ಸುಧಾಕರ ಶೆಟ್ಟಿ , ಮಹೇಶ್ ಬಜತ್ತೂರು, ಮೂಲಚಂದ್ರ, ಕಿಶನ್ ಕಾಂಚನ, ಪ್ರಸಾದ್ ಪಚ್ಚಾಡಿ, ಕಿಶೋರ್ ನೀರಕಟ್ಟೆ ಮತ್ತಿತರರು ಭಾಗವಹಿಸಿದ್ದರು.