ನಾಣಿಲ ಶಾಲೆಯಲ್ಲಿ ಸ್ವಾತಂತ್ರೋತ್ಸವ

0

ಕಾಣಿಯೂರು: ದ.ಕ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಎಸ್. ಡಿ.ಎಂ .ಸಿ ಅಧ್ಯಕ್ಷರಾದ ವಸಂತ ದಲಾರಿ ಅವರು ದ್ವಜಾರೋಹಣಗೈದರು.


ಮಕ್ಕಳು ಸಂಭ್ರಮದ ಮೆರವಣಿಗೆಯಲ್ಲಿ ಸ್ಬಾತ್ರಂತ್ರ ವೀರರ ಹೆಸರಗಳ ಘೋಷಣೆಗಳನ್ನು ಕೂಗಿ ಹೋರಾಟಗಾರರ ಸ್ವಾತಂತ್ರ್ಯದ ಕಿಚ್ಚನ್ನು ನೆನಪಿಸಿದರು. ಆನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿ..ಎಂ. ಸಿ ಯ ಅಧ್ಯಕ್ಷರಾದ ವಸಂತ ದಲಾರಿ ವಹಿಸಿಕೊಂಡರು.


ಕಾಣಿಯೂರು ಗ್ರಾಮ ಪಂಚಯಾತ್ ಸದಸ್ಯರಾದ ಕೀರ್ತಿ ಕುಮಾರಿ ಅಂಬುಲ, ಗಂಗಮ್ಮ ಗುಜ್ಜರ್ಮೆ, ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಯಂತ್ ಅಂಬುಲ,ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ಕುಸುಮಾವತಿ,ಮೋನಪ್ಪ ಅಂಬುಲ ಹಾಗೂ ಎಸ್. ಡಿ. ಎಂಸಿ ಸದಸ್ಯರು ಮತ್ತು ಪೋಷಕರು,ಶಿಕ್ಷಕರು ಮತ್ತು ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಶಾಲ ಮುಖ್ಯಗುರುಗಳಾದ ಪದ್ಮಯ್ಯ ಗೌಡರು ಸ್ವಾಗತಿಸಿ, ಮತ್ತು ಸಹ ಶಿಕ್ಷಕಿ ಮಂಗಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಚೇತನ ವಂದಿಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here