ನೆಲ್ಯಾಡಿ: ಶಿರಾಡಿ ಗ್ರಾ.ಪಂ.ನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ವಿನೀತಾ ಎಂ.ಬಿ.ಅವರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡ ನೆಡಲಾಯಿತು. ಬಳಿಕ ಪಂಚಾಯಿತಿ ಅಧ್ಯಕ್ಷೆ ವಿನೀತಾ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯಶಿಕ್ಷಕ ಚಾಕೋ ವರ್ಗೀಸ್‌ರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಮೆಸ್ಕಾಂ ಶಾಖಾಧಿಕಾರಿ ರಮೇಶ್, ಪಿಡಿಒ ಯಶವಂತ ಬೆಳ್ಚಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚ್ ಪ್ರಾಣ್ ಪ್ರತಿಜ್ಞೆ ಕೈಗೊಳ್ಳಲಾಯಿತು.
ಸನ್ಮಾನ:
ಮೆಸ್ಕಾಂ ಜೆಇ ರಮೇಶ್ ಬಿ., ಪವರ್‌ಮ್ಯಾನ್‌ಗಳಾದ ರಜಾಕ್ ಎಂ.ನದಾಫ್, ಅಡಿವೆಪ್ಪ ಹ.ಮಾದರ ಹಾಗೂ ನಿವೃತ್ತ ಮುಖ್ಯಶಿಕ್ಷಕ ಚಾಕೋ ವರ್ಗೀಸ್ ಅವರನ್ನು ಸನ್ಮಾನಿಸಾಯಿತು. ಸನ್ಮಾನಿತರ ಪರವಾಗಿ ರಮೇಶ್ ಬಿ.,ಅವರು ಮಾತನಾಡಿದರು. ಗ್ರಾ.ಪಂ.ಕಾರ್ಯದರ್ಶಿ ಶಾರದಾ, ಸದಸ್ಯರುಗಳಾದ ಸಣ್ಣಿಜಾನ್, ಎಂ.ಕೆ.ಪೌಲೋಸ್, ರಾಧಾತಂಗಪ್ಪನ್, ಲಕ್ಷ್ಮಣ ಗೌಡ, ಕಮಲ, ಸುಮಿತ್ರಾ, ಸಿಬ್ಬಂದಿಗಳಾದ ತನಿಯಪ್ಪ, ಏಲಿಯಾಸ್ ಕೆ.ಸಿ., ಸ್ಮಿತಾ, ರಮ್ಯ, ವಿಜಯ, ತೋಮಸ್, ವಿಆರ್‌ಡಬ್ಲ್ಯು ಕಾರ್ಯಕರ್ತ ಸುನಿಲ್ ಪಿ.ವಿ., ಗ್ರಂಥಾಲಯ ಮೇಲ್ವಿಚಾರಕಿ ರೇಖಾ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಸಣ್ಣಿಜಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಯಶವಂತ ಬೆಳ್ಚಡ ವಂದಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ವ್ಯಾಪ್ತಿಯ ಶಾಲೆ,ಅಂಗನವಾಡಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.