ಹಿರೆಬಂಡಾಡಿ: ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಆ.15ರಂದು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಲಾಯಿತು.
ಹಿರಿಯರಾದ ವೆಂಕಟ್ರಮಣ ಕುದ್ರೆತ್ತಾಯ ಕೊನೆಮಜಲು ಅವರು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ, ದಾನಿಗಳ ಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಗೌಡರವರು ದೇಣಿಗೆ ನೀಡಿದ ದಾನಿಗಳಿಗೆ ಅಭಿನಂದನಾ ಪತ್ರ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ, ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ವಿನೋದರ ಮಾಳ, ದಿನೇಶ್ ಗೌಡ, ಆನಂದ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ್, ಮಾಜಿ ಅಧ್ಯಕ್ಷ ಸಂಜೀವ ಗೌಡ ಕೊನೆಮಜಲು, ರಮೇಶ್ ದರ್ಖಾಸು, ಲಕ್ಷ್ಮಣ ಗೌಡ ಪುತ್ಯೆ, ಯತೀಶ್ ಗುಂಡಿಜೆ, ಲಲಿತ ವಳಕಡಮ, ತೇಜೇಶ್ ಬಲ್ತಕುಮೇರ್, ಕೊಯಿಲ ಗ್ರಾ.ಪಂ.ಸದಸ್ಯೆ ಲತಾನವೀನ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಪಿ.ಎಸ್.ನಾರಾಯಣ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ.ನಿರೂಪಿಸಿದರು. ಗೌರವ ಶಿಕ್ಷಕಿ ಲಾವಣ್ಯ ಸಹಕರಿಸಿದರು. ಊರ,ಪರವೂರ ದಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ದೇಣಿಗೆ ನೀಡಿ ಸ್ಮಾರ್ಟ್ ಟಿ.ವಿ.ಮೂಲಕ ಸ್ಮಾರ್ಟ್ ಕ್ಲಾಸ್ ನಡೆಸಲು ಸಹಕರಿಸಿದರು. ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.