ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್ನ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಸಂಧ್ಯಾಪ್ರಸಾದ್ ಕೆ. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ವೇದಾವತಿ ಕೆ.,ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆ ಆ.18ರಂದು ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು. 15 ಸದಸ್ಯ ಬಲದ ಪೆರಾಬೆ ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತ 9, ಕಾಂಗ್ರೆಸ್ ಬೆಂಬಲಿತ 4 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕುಂತೂರು 2ನೇ ವಾರ್ಡ್ನ ಬಿಜೆಪಿ ಬೆಂಬಲಿತ ಸದಸ್ಯೆ ಸಂಧ್ಯಾಪ್ರಸಾದ್ ಕೆ., ಪೆರಾಬೆ 3ನೇ ವಾರ್ಡ್ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮೇನ್ಸಿ ಸಾಜನ್ ಹಾಗೂ ಕುಂತೂರು 1ನೇ ವಾರ್ಡ್ನ ಪಕ್ಷೇತರ ಸದಸ್ಯೆ ಮಮತಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮೇನ್ಸಿ ಸಾಜನ್ರವರು ನಾಮಪತ್ರ ಹಿಂತೆಗೆದುಕೊಂಡು ಸಂಧ್ಯಾಪ್ರಸಾದ್ ಕೆ.,ಹಾಗೂ ಮಮತಾ ಕಣದಲ್ಲಿ ಉಳಿದಿದ್ದರು. ಬಳಿಕ ನಡೆದ ಗುಪ್ತ ಮತದಾನದಲ್ಲಿ ಬಿಜೆಪಿ ಬೆಂಬಲಿತ ಸಂಧ್ಯಾ ಅವರು 9 ಮತ ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಗೊಂಡರು. ಮಮತಾ ಅವರಿಗೆ 6 ಮತ ಲಭಿಸಿತು.
ಪರಿಶಿಷ್ಠ ಪಂಗಡ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪೆರಾಬೆ 1ನೇ ವಾರ್ಡ್ನ ಬಿಜೆಪಿ ಬೆಂಬಲಿತ ಸದಸ್ಯೆ ವೇದಾವತಿ ಕೆ.ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ನಡೆದಿದೆ. ಸದಸ್ಯರಾದ ಮೋಹನದಾಸ್ ರೈ, ಸಂಧ್ಯಾ ಕೆ., ಚಂದ್ರಶೇಖರ ರೈ, ಬಿ.ಕೆ.ಕುಮಾರ್, ವೇದಾವತಿ, ಸುಶೀಲ, ಕಾವೇರಿ, ಸಿ.ಎಂ.ಫಯಾಝ್, ಲೀಲಾವತಿ, ಕೆ.ಸದಾನಂದ, ಮೇನ್ಸಿ ಸಾಜನ್, ಮಮತಾ, ಮೋಹಿನಿ, ಪಿ.ಜಿ.ರಾಜು, ಕೃಷ್ಣ ವೈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕಡಬ ತಾ.ಪಂ.ವ್ಯವಸ್ಥಾಪಕ ಭುವನೇಂದ್ರ ಕುಮಾರ್, ಪೆರಾಬೆ ಗ್ರಾ.ಪಂ.ಪಿಡಿಒ ಶಾಲಿನಿ ಕೆ.ಬಿ.,ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಸಿಬ್ಬಂದಿಗಳಾದ ಪದ್ಮಾವತಿ ಕೆ., ಹರೀಶ್ಕುಮಾರ್, ಉಮೇಶ್ ಕೆ., ಪ್ರಜ್ವಲ್ ಪಿ.ಹೆಚ್.,ಸಹಕರಿಸಿದರು.
ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಂಧ್ಯಾಪ್ರಸಾದ್ರವರು ಕುಂತೂರು ಗ್ರಾಮದ ಕೆದ್ದೊಟ್ಟೆ ನಿವಾಸಿ, ಕೃಷಿಕ ಶಿವಪ್ರಸಾದ್ರವರ ಪತ್ನಿ. ಮೊದಲ ಬಾರಿಗೆ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. ಮೊದಲ ಅವಧಿಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಒಕ್ಕಲಿಗ ಸ್ವಸಹಾಯ ಸಂಘ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ವೇದಾವತಿ ಅವರು ಕುಂತೂರು ಗ್ರಾಮದ ಎಲ್ಲಾಜೆ ನಿವಾಸಿ ಬಾಬು ನಾಯ್ಕ್ರವರ ಪತ್ನಿ. ಈ ಹಿಂದೆ ಎರಡು ಸಲ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾಗಿದ್ದರು. ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದ ವೇದಾವತಿ ಅವರಿಗೆ ಇದೀಗ ಉಪಾಧ್ಯಕ್ಷ ಸ್ಥಾನ ಲಭಿಸಿದೆ.
ಬಿಜೆಪಿ ಮುಖಂಡರಿಂದ ಅಭಿನಂದನೆ:
ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಮುಖಂಡರು ಬಿಜೆಪಿ ಶಾಲು, ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಜಿ.ಪಂ.ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಬಿಜೆಪಿ ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಸುರೇಶ್ ದೇಂತಾರು, ಬಿಜೆಪಿ ಮುಖಂಡರಾದ ಪೂವಪ್ಪ ನಾಯ್ಕ್ ಶಾಂತಿಗುರಿ, ಜನಾರ್ದನ ಸುರುಳಿ, ದಯಾನಂದ ಗೌಡ ಆಲಡ್ಕ, ಗಂಗಾರತ್ನ ವಸಂತ್, ನಿತೀಶ್ ಗೌಡ ಏನಾಜೆ ಮತ್ತಿತರರು ಅಭಿನಂದನೆ ಸಲ್ಲಿಸಿದರು.