ಉಪ್ಪಿನಂಗಡಿ: ಹಿರೆಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ, ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಕೆಮ್ಮಾರ ಸ.ಪ್ರಾ ಶಾಲೆಗೆ ನೂತನ ಕೊಠಡಿ ನಿರ್ಮಾಣ ಮತ್ತು ಪೂ.ಪ್ರಾ ಶಾಲೆ ನಡೆಸಲು ಅನುಮತಿ ಕೋರಿ ಸ್ಥಳೀಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಶಾಲೆಯು 1954 ರಲ್ಲಿ ಆರಂಭಗೊಂಡಿರುತ್ತದೆ. ಸುಮಾರು 69 ವರ್ಷ ಹಳೇಯದಾಗಿರುವ ಈ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಎಂಟನೇ ತರಗತಿ ವರೆಗೆ 110 ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟರವರೆಗೆ ಯಾವುದೇ ನೂತನ ಕೊಠಡಿ ಅಥವಾ ಕಟ್ಟಡದ ಮಂಜೂರು ಆಗಿರುವುದಿಲ್ಲ. ಹಳೇಯ ಕಟ್ಟಡ ಬಿರುಕು ಮತ್ತು ಮೇಲ್ಛಾವಣಿ ಗೆದ್ದಲು ಹಿಡಿದು ತೀರಾ ಹದಗೆಟ್ಟಿದ್ದು , ಹೊಸ ಕೊಠಡಿಗಳ ನಿರ್ಮಾಣ ಕೋರಿ ಮತ್ತು 2024-25ನೇ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಸರಕಾರಿ ನಿಯಮದಂತೆ ಆಯ್ಕೆ ಮಾಡಲು ಅನುಮತಿ ಕೋರಿ ಎರಡು ಪ್ರತ್ಯೇಕ ಮನವಿಯನ್ನು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ಶೆಟ್ಟಿ, ಶಾಲಾಭಿವೃಧ್ದಿ ಸಮಿತಿ ಸದಸ್ಯರಾದ ವಾಮನ ಬರಮೇಲು, ಪಧ್ಮನಾಭ ಶೆಟ್ಟಿ , ಹಳೆ ವಿದ್ಯಾರ್ಥಿ ಅಬ್ದುಲ್ ಗಫ್ಫಾರ್ ಕೆಮ್ಮಾರ ಉಪಸ್ಥಿತರಿದ್ದರು.