ಹಿಂಜಾವೇ ಮುಖಂಡ ಸತೀಶ್ ದಾವಣಗೆರೆ ಬಂಧನ ಖಂಡಿಸಿ ಪುತ್ತೂರುನಲ್ಲಿ ದೊಂದಿ ಹಿಡಿದು ಪ್ರತಿಭಟನೆ

0

ಭವ್ಯ ಭಾರತ, ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಿ – ಹರೀಶ್ ಶಕ್ತಿನಗರ
ದಬ್ಬಾಳಿಕೆಗೆ ಸರಿಯಾದ ಉತ್ತರ ಕೊಡಲು ಹಿಂದು ಸಮಾಜ ಕಾಯುತ್ತಿದೆ-ಹಸಂತಡ್ಕ
ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡಬೇಡಿ-ಚಿನ್ಮಯ್ ರೈ

ಪುತ್ತೂರು:ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರನ್ನು ಗೌರಿಬಿದನೂರು ಪೊಲೀಸರು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ಪುತ್ತೂರು ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ಸಂಘ ಪರಿವಾರದ ಬೆಂಬಲದೊಂದಿಗೆ ಆ.21ರಂದು ಸಂಜೆ ದರ್ಬೆಯಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಲಾಯಿತು.


ಭವ್ಯ ಭಾರತ, ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಿ:
ಹಿಂದು ಜಾಗರಣ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ಹರೀಶ್ ಶಕ್ತಿನಗರ ಅವರು ಮಾತನಾಡಿ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರು ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಸಮಾಜದ ಹಿತದೃಷ್ಟಿಯಿಂದ ಭಾಷಣ ಮಾಡಿದ್ದಾರೆ. ಆದರೆ ಅದನ್ನೇ ಯಾರದ್ದೋ ಒತ್ತಡಕ್ಕೆ ಮಣಿದು 4 ದಿನದ ಬಳಿಕ ಪೊಲೀಸರು ಬಂಧಿಸಿರುವುದು ಅದಲ್ಲದೆ ಸುಮೋಟೋ ಕೇಸು ದಾಖಲಿಸಿರುವುದು ಖಂಡನೀಯ. ಅಖಂಡ ಭಾರತ ಯಾಕೋಸ್ಕರ ಮಾಡುವುದು ಎಂದು ಮೊದಲು ಅರ್ಥ ಮಾಡಿಕೊಳ್ಳುವುದು ಅಗತ್ಯ.ಭವ್ಯ ಭಾರತ, ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ನಿಮ್ಮ ಮಕ್ಕಳಿಗೆ ಇಟ್ಟ ಹೆಸರು ಬದಲಾಗುವುದಕ್ಕೂ ಹೆಚ್ಚು ದಿನ ಉಳಿದಿಲ್ಲ ಎಂದು ಎಚ್ಚರಿಕೆ ನೀಡಿದರು.


ದಬ್ಬಾಳಿಕೆಗೆ ಸರಿಯಾದ ಉತ್ತರ ಕೊಡಲು ಹಿಂದು ಸಮಾಜ ಕಾಯುತ್ತಿದೆ:
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಅವರು ಮಾತನಾಡಿ ಬಹುಸಂಖ್ಯಾತರಿರುವಲ್ಲಿ ಕತ್ತಲು ಮಾಡುವ ಯೋಚನೆ ಮಾಡುವ ಜೊತೆಗೆ ರಾಜ್ಯದಲ್ಲಿ ಅಪ್ಘಾನಿಸ್ತಾನ ಆಡಳಿತ ತರುವ ಹುನ್ನಾರದ ಯೋಚನೆ ಏನಿದೆಯೋ ಅದಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದೇವೆ.ನಮ್ಮ ಅನೇಕ ಸಂಘಟನೆಯ ಮುಖಂಡರ ಮೇಲೆ ಕೇಸು ದಾಖಲಿಸುವ ಮೂಲಕ ತೊಂದರೆ ನೀಡಿದರೆ ಹಿಂದು ಸಮಾಜ ಸಮ್ಮನಿರುವುದಿಲ್ಲ.ಶಾಸ್ತ್ರ ಮತು ಶಸ್ತ್ರದ ಆಧಾರದ ಮೇಲೆ ಬಂದ ಹಿಂದು ಸಮಾಜದ ಮೇಲೆ ದಾಳಿ, ಚೆಲ್ಲಾಟ ಮಾಡುವಾಗ ಅಗತ್ಯ ಬಿದ್ದಾಗ, ಅನಿವಾರ್ಯವಾದಲ್ಲಿ ಹಿಂದು ಸಮಾಜ ಸುಮ್ಮನೆ ಕೂತುಕೊಳ್ಳುವುದಿಲ್ಲ. ದಬ್ಬಾಳಿಕೆಗೆ ಸರಿಯಾದ ಉತ್ತರ ಕೊಡಲು ಹಿಂದು ಸಮಾಜ ಕಾಯುತ್ತಿದೆ ಎಂದರು. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಅವರನ್ನು ಖುಷಿ ಪಡಿಸುವುದಕ್ಕಾಗಿ ಹಿಂದು ಸಮಾಜದ ಮೇಲೆ ದಬ್ಬಾಳಿಕೆ ನಡೆದರೆ ನಮ್ಮ ನಮ್ಮ ಸಂಘಟನೆಗಳು ಬಜರಂಗದಳ, ಜಾಗರಣ, ವಿಶ್ವಹಿಂದು ಪರಿಷತ್, ಎಬಿವಿಪಿ ಸಹಿತ ಪರಿವಾರ ಸಂಘಟನೆಗಳು ಇಡೀ ಹಿಂದೂ ಸಮಾಜವನ್ನು ರಸ್ತೆಗೆ ಕರೆದುಕೊಂಡು ಬಂದು ಸರಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ಯಾವುದೋ ಮೇಲಿನವರ ಒತ್ತಡಕ್ಕೆ ಪೊಲೀಸ್ ಇಲಾಖೆಗಳು ಈ ರೀತಿಯ ಕೆಲಸ ಮಾಡಬಾರದು ಎಂದು ಹಿಂದು ಸಮಾಜದ ವಿನಂತಿ.ಆದರೆ ಮತ್ತೆ ಮತ್ತೆ ತೊಂದರೆ ಕೊಟ್ಟರೆ ಹಿಂದು ಸಮಾಜ ಮುಂದಿನ ದಿನ ಯಾವ ರೀತಿಯ ಹೋರಾಟ ಮಾಡಬೇಕಾದೀತು ಎಂದು ನಿಶ್ಚಯ ಮಾಡಬೇಕಾದೀತು ಎಂದರು.


ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಬೇಡಿ:
ಹಿಂದು ಜಾಗರಣ ವೇದಿಕೆ ಮುಖಂಡ, ನ್ಯಾಯವಾದಿ ಚಿನ್ಮಯ್ ರೈ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಯಾವಾಗೆಲ್ಲ ಅಧಿಕಾರಕ್ಕೆ ಬರುತ್ತದೆಯೋ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತದೆ. ಯಾವುದೇ ದಾಖಲೆ ಇಲ್ಲದೆ ಸುಮೊಟೊ ಕೇಸ್ ದಾಖಲಿಸಿ, ಯಾವುದೇ ನೋಟೀಸ್ ನೀಡದೆ ಮನೆಯ ಬಾಗಿಲು ಮುರಿದು ಸತೀಶ್ ದಾವಣಗೆರೆಯವರನ್ನು ಬಂಧಿಸಲಾಗಿದೆ.ಕೆಲವು ದಿನಗಳ ಹಿಂದೆ ವಿಟ್ಲದಲ್ಲಿ ಅಕ್ರಮ ಗೋ ಸಾಗಾಟ ತಡೆದ ಕಾರ್ಯಕರ್ತರ ಮೇಲೆ ಕೇಸು, ಸುಳ್ಯದಲ್ಲಿ ಲವ್ ಜಿಹಾದ್ ವಿರುದ್ಧ ಮಾತನಾಡಿದ್ದಕ್ಕೆ ಕೇಸು ಹೀಗೆ ಸರಕಾರ ಬಂದು ಕೆಲವೇ ತಿಂಗಳೊಳಗೆ ಹಿಂದುಗಳಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಬಂದಾಗ ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡಬೇಡಿ.ಮುಂದೆ ನಮಗೂ ಅವಕಾಶವಿದೆ ಎಂದರಲ್ಲದೆ, ಹಿಂದುತ್ವಕ್ಕೆ ತೊಂದರೆ ಆದಾಗ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದರು.

ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕ್ ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ, ಪದ್ಮಶ್ರೀ ಸೋಲಾರ್ ಸಿಸ್ಟಮ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಯುವವಾಹಿನಿ ಪ್ರಮುಖ್ ಮನೀಶ್ ಬಿರ್‍ವ, ಅವಿನಾಶ್ ಪುರುಷರಕಟ್ಟೆ, ಭರತ್ ಈಶ್ವರಮಂಗಲ, ರಾಜೇಶ್ ಪಂಚೋಡಿ, ಪ್ರಜ್ವಲ್ ಈಶ್ವರಮಂಗಲ, ಗಿತೀಶ್ ಅಜ್ಜಿಕಲ್ಲು, ಬಜರಂಗದಳ ನಗರ ಸಂಚಾಲಕ ಜಯಂತ್, ಉಪಾಧ್ಯಕ್ಷ ಜಗದೀಶ್ ನೀರ್ಪಾಜೆ, ನಗರ ಸಹಸಂಚಾಲಕ ಪ್ರವೀಣ್ ಕಲ್ಲೇಗ, ಧನ್‌ರಾಜ್ ಬೆಳ್ಳಿಪ್ಪಾಡಿ, ಪ್ರಜ್ವಲ್ ಸಂಪ್ಯ, ಹರ್ಷಿತ್ ಬಲ್ನಾಡು, ರೂಪೇಶ್ ಬಲ್ನಾಡು, ರಾಮ್‌ಪ್ರಸಾದ್ ಮಯ್ಯ, ವಿಶ್ವಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ನಗರ ಸಹಕಾರ್ಯದರ್ಶಿ ಜಿತೇಶ್ ಬಲ್ನಾಡು, ಹಿಂದು ಮಹಾಸಭಾದ ಧನ್ಯಕುಮಾರ್ ಬೆಳಂದೂರು, ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಮನೀಶ್ ಕುಲಾಲ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೊಡಿ, ಜಯಶ್ರೀ ಎಸ್ ಶೆಟ್ಟಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಬಿಜತ್ರೆ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here