*ರೂ.3.45 ಲಕ್ಷ ಲಾಭ
* ಶೇ.25 ಡಿವಿಡೆಂಡ್
* 32 ಪೈಸೆ ಬೋನಸ್
ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.3,45,715.13 ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ.25 ಗರೀಷ್ಠ ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 32 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.23ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ಸಾಲಿನಲ್ಲಿ ಸಂಘವು 176 ಮಂದಿ ಸದಸ್ಯರಿದ್ದು ಒಟ್ಟು ರೂ.41,300 ಪಾಲು ಬಂಡವಾಳ ಹೊಂದಿದೆ. 116 ಮಂದಿ ಹಾಲು ಉತ್ಪಾದಕರಿಂದ ಪ್ರತಿದಿನ 1380ಲೀ ಹಾಲು ಸಂಗ್ರಹವಾಗುತ್ತಿದ್ದು ವಾರ್ಷಿಕವಾಗಿ 5,03,777.1 ಲೀಟರ್ ಹಾಲು ಸಂಗ್ರಹವಾಗಿದೆ. ಇದರಿಂದ ರೂ.1,57,93,552.86 ಆದಾಯ ಬಂದಿರುತ್ತದೆ. ಸ್ಥಳೀಯವಾಗಿ 4,277 ಲೀಟರ್ ಹಾಲು ಸ್ಥಳೀಯವಾಗಿ ಹಾಲು ಮಾರಾಟವಾಗಿದ್ದು ರೂ.1,88,188 ಆದಾಯ ಬಂದಿರುತ್ತದೆ. ರೂ.52,029 ರೂಗಳ ಮಾದರಿ ಹಾಲು ಮಾರಾಟವಾಗಿದೆ. 4,685 ಚೀಲ ಪಶು ಆಹಾರ, 2,929 ಕೆ.ಜಿ ಲವಣ ಮಿಶ್ರಣ ಮಾರಾಟವಾಗಿದೆ. ಸಂಘಕ್ಕೆ ಒಟ್ಟು ರೂ.16,29,319.68 ಲಾಭ ಬಂದಿರುತ್ತದೆ. ಸಿಬಂದಿ ವೇತನ ರೂ.5,68,240, ಸಾದಿಲ್ವಾರು ಖರ್ಚು ರೂ.4,49,456.55 ಹಾಗೂ ಕಾದಿರಿಸಿದ ವೆಚ್ಚ ರೂ.2,65,908 ಕಳೆದು ರೂ.3,45,715.13 ನಿವ್ವಳ ಲಾಭ ಗಳಸಿದೆ. ಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯAತೆ ವಿಂಗಡಿಸಲಾಗಿದೆ ಎಂದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ, ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳು, ಪಾಲನೆ ಹಾಗೂ ಪೋಷಣೆಗಳ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕರಾದ ಉದಯ ಕುಮಾರ್, ರಮೇಶ್ ಜಿ., ಜಯಗುರು ಆಚಾರ್, ಸೇಸಪ್ಪ ರೈ, ಜಯಾನಂದ ಆಳ್ವ, ರಂಜಿತ್ ಕೆ., ದೇವಕಿ ಎಚ್., ಚೇತನ, ಶಾರದಾ ಬಿ ಹಾಗೂ ಗಿರಿಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ನಿರ್ದೇಶಕರಾದ ಜಯಗುರು ಆಚಾರ್, ಅನಿಲ್ ಕುಮಾರ್ ಕಣ್ಣಾರ್ನೂಜಿ ಹಾಗೂ ಹೆಗ್ಗಪ್ಪ ರೈಯವರನ್ನು ಸನ್ಮಾನಿಸಿಲಾಯಿತು. ಸದಸ್ಯರಾದ ರಮೇಶ್ ಪಜಿಮಣ್ಣು, ಉಮೇಶ್ ಅಂಬಟ, ಸುರೇಶ್ ಕಣ್ಣಾರಾಯ ಸಲಹೆ ಸೂಚನೆಗಳನ್ನು ನೀಡಿದರು. ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಜಿ. ವರದಿ ಮಂಡಿಸಿದರು. ಕಾರ್ಯದರ್ಶಿ ಜಿನ್ನಪ್ಪ ಸಾಲಿಯಾನ್ ಸಂಘದ ಲೆಕ್ಕಪತ್ರಗಳನ್ನು ಮಂಡಿಸಿ, ವಂದಿಸಿದರು. ಹಾಲು ಪರೀಕ್ಷಕ ನಾರಾಯಣ ಶೆಟ್ಟಿ ಹಾಗೂ ಸಹಾಯಕ ಸುರೇಶ್ ಸಹಕರಿಸಿದರು.