





ಪುತ್ತೂರು: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೇವೆಯ ಪ್ರಯುಕ್ತ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ, “ಚೂಡಾಮಣಿ ” ಎಂಬ ಯಕ್ಷಗಾನ ತಾಳಮದ್ದಳೆ ಆ.24ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ನೇರಂಕಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ ಅಡಿಗ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶೃಂಗಾರ ರಾವಣ), ಮನೋರಮಾ .ಜಿ.ಭಟ್ (ಸೀತಾ), ಹರಿಣಾಕ್ಷಿ ಜೆ .ಶೆಟ್ಟಿ (ಲಂಕಿಣಿ) ಸಹಕರಿಸಿದರು ದೇವಳದ ಆಡಳಿತ ಸಮಿತಿಯ ಜತೆ ಕಾರ್ಯದರ್ಶಿ ನಾಗೇಂದ್ರ ಪೈ ಸ್ವಾಗತಿಸಿ, ಮಹಿಳಾ ಯಕ್ಷಗಾನ ಸಂಘದ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು.











