ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕೆದಂಬಾಡಿ ಗ್ರಾಮ ಸಮಿತಿ ವತಿಯಿಂದ ಕೊಯಿಲ ಪಶು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಶೀತಲೀಕರಣ ಘಟಕಕ್ಕೆ ಒಂದು ದಿನದ ಅಧ್ಯಯನ ಪ್ರವಾಸ ಇತ್ತೀಚೆಗೆ ಕೈಗೊಳ್ಳಲಾಯಿತು.
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್ ವಿವಿಧ ಮಾಹಿತಿ ನೀಡಿದರು. ದೇಶೀ ತಳಿಯ ದನ ಮತ್ತು ಕರುಗಳ ಪೋಷಣೆಯ ಬಗ್ಗೆ, ಆಧುನಿಕ ಪದ್ದತಿಯ ಹಟ್ಟಿ ರಚನೆ, ಮಾದರಿ ಹುಲ್ಲು ಘಟಕ, ಹಂದಿ ಸಾಕಣೆ, ಕೋಳಿ ಸಾಕಾಣಿಕೆ ಘಟಕಗಳನ್ನು ಇದೇ ವೇಳೆ ವೀಕ್ಷಿಸಲಾಯಿತು. ಬಳಿಕ ನೂತನ ಪಶು ವೈದ್ಯಕೀಯ ಕಾಲೇಜುಗೆ ಭೇಟಿ ನೀಡಲಾಯಿತು.
ಆಲಂಕಾರು ಹಾಲು ಶೀತಲೀಕರಣ ಘಟಕದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ರೈ ಮನವಳಿಕೆ ಮಾಹಿತಿ ನೀಡಿದರು. ವಿಆರ್ಡಿಎಫ್ ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯ ಕಡಮಜಲು ಸುಭಾಸ್ ರೈ, ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕೃಷಿಕರಾದ ಗಣಪತಿ ಭಟ್ ಸನ್ಯಾಸಿಗುಡ್ಡೆ, ಲಲಿತ ಜೆ. ಭಟ್, ರಾಜೀವ ರೈ ಕೋರಂಗ, ಕರುಣಾಕರ ರೈ ಅತ್ರಿಜಾಲು, ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ, ಚಂದ್ರಶೇಖರ ಶೆಟ್ಟಿ ಪಯಂದೂರು, ಬಾಬು ಕೋರಂಗ, ದಿನಕರ ರೈ ಮಾನಿಪ್ಪಾಡಿ, ಮೋಕ್ಷಕೃಷ್ಣ ಮೇಂಡ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡರು.