ಸಮಾಜಕ್ಕೆ ಅರ್ಪಣಾ ಮನೋಭಾವನೆ ಮಾದರಿ ಕಾರ್ಯಕ್ರಮ – ಉಚಿತ ದಂತ ಚಿಕಿತ್ಸಾ, ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಬದಲಾಗುವ ಸಂದೇಶ ಕೊಟ್ಟವರು ಹರೀಶ್ ಭಟ್ – ಅರುಣ್ ಕುಮಾರ್ ಪುತ್ತಿಲ

ದೇವರು ಮೆಚ್ಚುವ ಸೇವೆ – ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ

ಪುತ್ತೂರು: ತುಳಸಿ ಕ್ಯಾಟರ‍್ಸ್ ಪುತ್ತೂರು, ಎಸ್.ಜಿ.ಪ್ಯೂರ್ ಮಸಾಲೆ, ಕುಂಕುಮ್ ಅಸೋಸಿಯೇಟ್ಸ್, ವಿಜಯ ಸರ್ವಿಸಸ್ ಇದರ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯನೆಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಮತ್ತು ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವು ಸೆ.14ರಂದು ಪುತ್ತೂರು ಜೈನ ಭವನದಲ್ಲಿ ನಡೆಯಿತು.


ಸಮಾಜಕ್ಕೆ ಅರ್ಪಣೆ ಮಾಡುವುದನ್ನು ತೋರಿಸುವ ಮಾದರಿ ಕಾರ್ಯಕ್ರಮ:
ಶಿಬಿರವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ,1 ಲಕ್ಷ ಜನರಿಗೆ ಕೂಡಾ ಅಡುಗೆ ಮಾಡಿ ಹಾಕುವ ಶಕ್ತಿ ಇದ್ದರೆ ಅದು ಹರೀಶ್ ಭಟ್ ಅವರಿಗೆ. ಅಂತಹ ಸಾಮಾರ್ಥ್ಯವುಳ್ಳ ಅವರು ತನ್ನ ವ್ಯವಹಾರದಲ್ಲಿ ಒಂದಾಂಶವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಉದ್ಯಮಿ ಸಮಾಜಕ್ಕೆ ತಮ್ಮ ಸೇವೆ ಯಾವ ರೀತಿ ಕೊಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಈ ಕಾರ್ಯಕ್ರಮ ಮಾದರಿ ಆಗಿದೆ ಎಂದರು.


ಬದಲಾಗುವ ಸಂದೇಶ ಕೊಟ್ಟವರು ಹರೀಶ್ ಭಟ್:

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ’ಸೇವೆಯೆಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ’ ಎಂಬಂತೆ ಬದುಕಿನ ಸಾರ್ಥ್ಯಕ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಹರೀಶ್‌ ಅವರು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭ ಪೂರ್ಣ ಸಹಕಾರ ನೀಡಿದ್ದಾರೆ. ಇವತ್ತು ದೇಶ ಬದಲಾಗಿದೆ, ಸಮಾಜ ಬದಲಾಗಿದೆ ಎಂದು ಇಂತಹ ಕಾರ್ಯಕ್ರಮ ಮೂಲಕ ಸಂದೇಶ ಕೊಟ್ಟವರು ಹರೀಶ್ ಭಟ್ ಅವರು ಎಂದರು.


ದೇವರು ಮೆಚ್ಚುವ ಸೇವೆ:
ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ, ಆರೋಗ್ಯ ನೀಡುವ ಕೆಲಸ ಸಮಾಜಕ್ಕೆ ಒಳ್ಳೆಯ ಅಧ್ಯಾಯ ರೂಪಿಸುವ ಕೆಲಸವಾಗಿದೆ. ಸಾಮಾನ್ಯ ಸಂಘ ಸಂಸ್ಥೆಗಳು ಇಂತಹ ಆರೋಗ್ಯ ಶಿಬಿರ ನಡೆಸುತ್ತಾರೆ. ಆದರೆ ಇವತ್ತು ವ್ಯಾಪಾರಸ್ಥರು ಕೂಡಾ ಸಮಾಜದ ಸೇವೆಯಲ್ಲಿ ಪಾಲ್ಗೊಳ್ಳಬಹುದೆಂದು ಹರೀಶ್ ಭಟ್ ತೋರಿಸಿಕೊಟ್ಟಿದ್ದಾರೆ. ಹೋಮ ಯಾಗಾದಿಗಳಿಂದ ದೇವರನ್ನು ಪ್ರಸನ್ನ ಮಾಡುವುದರೊಂದಿಗೆ ಇಂತಹ ಶಿಬಿರವನ್ನೂ ಮಾಡಿದರೆ ದೇವರು ಮೆಚ್ಚುತ್ತಾರೆ ಎಂದರು. ಶಿಬಿರವನ್ನು ನಡೆಸಿದೆ ತುಳಸಿ ಕ್ಯಾಟರರ‍್ಸ್‌ನ ಮಾಲಕ ಹರೀಶ್ ರಾವ್, ಎಸ್.ಜಿ.ಪ್ಯೂರ್ ಮಸಾಲೆ ಸಂಸ್ಥೆಯ ಗಿರಿಧರ್ ಭಟ್, ಶ್ರವಣ್, ಕುಂಕುಮ್ ಅಸೋಸಿಯೇಟ್ಸ್‌ನ ಸಂತೋಷ್ ರೈ ನಳಿಲು, ವಿಜಯ ಸರ್ವೀಸಸ್ ಮಂಜಲ್ಪಡ್ಪು ಇದರ ಮಾಲಕ ಮಂಜುನಾಥ್ ಭಟ್ ಅವರು ಅತಿಥಿಗಳನ್ನು ಗೌರವಿಸಿದರು. ಶಿಬಿರದ ನಿರ್ದೇಶಕ ಡಾ. ಮನೋಹರ್ ರೈ, ಡಾ ಅಲ್ಪಿಯ, ಡಾ.ಸೂರಜ್, ಡಾ.ಅಪ್ಸಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವೀಕೃತ್, ಪಬ್ಲಿಕ್ ಹೆಲ್ತ್ ಆಫೀಸರ್ ಸಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾನ್ವಿ ಪ್ರಾರ್ಥಿಸಿದರು. ಡಾ| ರಾಜೇಶ್ ಬೆಜ್ಜಂಗಳ ಸ್ವಾಗತಿಸಿ ವಂದಿಸಿದರು.

ಹಲವು ಚಿಕಿತ್ಸಾ ಸೌಲಭ್ಯ
ಶಿಬಿರದಲ್ಲಿ ಹಲವು ಚಿಕಿತ್ಸಾ ಸೇವೆಗಳಿತ್ತು. ಬಿ.ಪಿ ಮಧುಮೇಹ, ರಕ್ತ ವರ್ಗೀಕರಣ, ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗು ಔಷಧಿ ವಿತರಣೆ ನಡೆಯಲಿದ್ದು, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು ಮತ್ತು ಇತರ ವೈದ್ಯಕೀಯ ಸೇವೆಗಳು ಇತ್ತು. ಶಿಬರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

ವಿಶೇಷ ಚೇತನರಿಗೆ ವಸ್ತ್ರ ವಿತರಣೆ
ಪ್ರಜ್ಞಾಶ್ರಮದ ವಿಶೇಷ ಚೇತನವುಳ್ಳವರಿಗೆ ಶಿಬಿರದಲ್ಲಿ ವಸ್ತ್ರ ವಿತರಣೆ ಮಾಡಲಾಯಿತು. ಈ ಸಂದರ್ಭ ಪ್ರಜ್ಞಾಶ್ರಮದ ವ್ಯವಸ್ಥಾಪಕ ಅಣ್ಣಪ್ಪ ಅವರನ್ನು ಶಾಸಕರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here