ಪುತ್ತೂರು: ವಿದ್ಯಾಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಸಂಸ್ಕೃತಿ ಪರಿಚಯ ಸ್ಪರ್ಧೆಯಲ್ಲಿ ನೆಹರೂ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆಯಲ್ಲಿ ಚಿರಾಗ್ ಡಿ. ಗೌಡ, ಆಕಾಂಕ್ಷ್ ಪಿ. ಮತ್ತು ಅನೀಶ್ ಪ್ರಭು ಪ್ರಥಮ ಸ್ಥಾನಗಳನ್ನು ಗಳಿಸಿದರೆ, ಬಾಲ ವರ್ಗದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಧನ್ಯಶ್ರೀ ಎಚ್. ಪಿ. ಹಾಗೂ ಕಥಾಕಥನದಲ್ಲಿ ಆಪ್ತ ಚಂದ್ರಮತಿ ಮುಳಿಯ ಅವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಿಶು ವರ್ಗದ ವಿಜ್ಞಾನ ಮಾದರಿಯಲ್ಲಿ ಸ್ವೀನಲ್ ಡಿ’ ಸಿಲ್ವ, ಕಥಾಕಥನದಲ್ಲಿ ವಿಧಾತ್ರಿ ಐತಾಳ್ ಸರಪಾಡಿ ಹಾಗೂ ವಿಜ್ಞಾನ ರಸಪ್ರಶ್ನೆಯಲ್ಲಿ ಅಭಿಜ್ಞಾ, ಸನ್ಮಿತ್ ಮತ್ತು ಆರುಷ್ ಪ್ರಥಮ ಸ್ಥಾನ ಗಳಿಸಿ ಉತ್ತಮ ಸಾಧಕರೆಂದು ಗುರುತಿಸಿಕೊಂಡಿದ್ದಾರೆ.
ಕಿಶೋರ ವರ್ಗದ ಕ್ಲೇ ಮಾಡೆಲ್ ನಲ್ಲಿ ಸಂಚಯ್ ಎಸ್. ಗೌಡ ದ್ವಿತೀಯ, ವಿಜ್ಞಾನ ಮಾದರಿ ಮತ್ತು ಪ್ರಯೋಗದಲ್ಲಿ ಧ್ಯಾನ್ ಬಿ. ಶೆಟ್ಟಿ ಹಾಗೂ ಕೆ. ಜೆ. ತ್ರಿಶಾಲ್ ಕುಮಾರ್ ತೃತೀಯ ಸ್ಥಾನ ಪಡೆದಿರುತ್ತಾರೆ. ಬಾಲ ವರ್ಗದ ಗಣಿತ ಮಾದರಿಯಲ್ಲಿ ಶ್ಯಾಮ್ ಎಮ್. ಎಸ್. ದ್ವಿತೀಯ, ವಿಜ್ಞಾನ ಪ್ರಯೋಗದಲ್ಲಿ ನಿಹಾಲ್ ಸಿ. ರೈ ದ್ವಿತೀಯ, ವಿಜ್ಞಾನ ರಸಪ್ರಶ್ನೆಯಲ್ಲಿ ಅಚಿಂತ್ಯ, ತನಿಷ್ ಎಮ್. ಭಟ್ ಮತ್ತು ಆರುಷಿ ಪುತ್ತೂರಾಯ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ಮಾದರಿಯಲ್ಲಿ ಚಾರ್ವಿ, ಕ್ಲೇ ಮಾಡೆಲ್ ನಲ್ಲಿ ಪೂರ್ವಿ ತೃತೀಯ ಸ್ಥಾನ ಗಳಿಸಿದ್ದಾರೆ. ಶಿಶು ವರ್ಗದ ಗಣಿತ ಮಾದರಿಯಲ್ಲಿ ಬೃಂದಾ ತೃತೀಯ ಸ್ಥಾನ ಗಳಿಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.