ಉಪ್ಪಿನಂಗಡಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂಗವಾಗಿ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.29ರಂದು ಕ್ರೀಡಾ ದಿನಾಚರಣೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ನಿರ್ದೇಶಕ ಶೇಷಪ್ಪ ಗೌಡ, ಮೇಜರ್ ಧ್ಯಾನ್‌ಚಂದ್ ಇಡೀ ವಿಶ್ವಕ್ಕೆ ಒಬ್ಬ ಮಾದರಿ ಕ್ರೀಡಾಪಟು. ಕ್ರೀಡೆಯೊಂದಿಗೆ ದೇಶ ಪ್ರೇಮ ಮೆರೆದ ಅಪ್ರತಿಮ ಸಾಧಕ. ಈತ ಹಾಕಿಯನ್ನು ಒಂದು ಧ್ಯಾನವೆಂಬಂತೆ ಗ್ರಹಿಸಿ ಕ್ರೀಡಾ ಸ್ಫೂರ್ತಿ ಮೆರೆದ ಧೀಮಂತನಾಗಿದ್ದು, ನಮಗೆಲ್ಲರಿಗೂ ಆದರ್ಶವಾಗಿದ್ದಾನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ ಸಾಧನ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕುಮಾರಿ ನಿರೀಕ್ಷಾ ವಂದಿಸಿದರು. ಕುಮಾರಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.