ಉಪ್ಪಿನಂಗಡಿಯಲ್ಲಿ ಫಲಾನುಭವಿಗಳ ಜೊತೆ ಸಿಎಂ ವೀಡಿಯೋ ಸಂವಾದ
ಪುತ್ತೂರು ಪುರಭವನ, ಪ್ರತಿ ಗ್ರಾ.ಪಂಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ
ಪುತ್ತೂರು,ಕಡಬ ಗ್ರಾ.ಪಂ.ಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ
ಪುತ್ತೂರು:ರಾಜ್ಯದ ನೂತನ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ, ಮನೆಯೊಡತಿಗೆ ಸರಕಾರದಿಂದ ಮಾಸಿಕ ರೂ.2000 ಪಾವತಿಯ ಬಹು ನಿರೀಕ್ಷಿತ `ಗೃಹಲಕ್ಷ್ಮೀ’ ಯೋಜನೆಗೆ ಆ.31ರಂದು ಚಾಲನೆ ದೊರೆಯಲಿದೆ.ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ.ರಾಜ್ಯದ ಸುಮಾರು 1 ಕೋಟಿಗೂ ಅಧಿಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ರೂ.2000 ಜಮೆಯಾಗಲಿದೆ.ರಾಜ್ಯದ ಪ್ರತಿ ಗ್ರಾಮ ಪಂಚಾಯತ್ಗಳಲ್ಲಿಯೂ ಈ ದಿನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದೆ.ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಪ್ರತಿ ಗ್ರಾಮ ಪಂಚಾಯತ್ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ಸಿಎಂ ಜೊತೆ ಸಂವಾದ:
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪುತ್ತೂರಿನಲ್ಲಿಯೂ ಇಲಾಖೆ ಸಿದ್ದತೆಗಳನ್ನು ಮಾಡಿಕೊಂಡಿದೆ.ಆ.29ರಂದು ಪ್ರಾಯೋಗಿಕವಾಗಿ ಕಾರ್ಯಕ್ರಮ ನಡೆಸಲಾಗಿದೆ.ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಗೃಹಲಕ್ಷ್ಮೀಗೆ ಚಾಲನೆ ನೀಡಲಿದ್ದಾರೆ.ಯೋಜನೆಗೆ ನೋಂದಾಯಿಸಿಕೊಂಡಿರುವ ಮನೆಯ ಯಜಮಾನಿಯ ಖಾತೆಗೆ 2 ಸಾವಿರ ರೂ.ಜಮೆಯಾಗಲಿದೆ.ಪುತ್ತೂರುಗೆ ಸಂಬಂಧಿಸಿ ತಾಲೂಕು ಮಟ್ಟದ ಕಾರ್ಯಕ್ರಮವು ಉಪ್ಪಿನಂಗಡಿ ಗ್ರಾ.ಪಂ ಸಭಾಂಗಣದನಲ್ಲಿ ನಡೆಯಲಿದೆ.ಇಲ್ಲಿ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಡಿಯೋ ಸಂವಾದ ನಡೆಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಭಾಗವಹಿಸಲಿದ್ದಾರೆ.ನಗರ ಸಭಾ ವ್ಯಾಪ್ತಿಯ ಪುರಭವನ ಹಾಗೂ ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಗ್ರಾ.ಪಂ.ಗಳ ಸಭಾಂಗಣದಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ನಡೆಯಲಿದೆ.ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಮೂಲಕ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ತಿಳಿಸಿದ್ದಾರೆ.
ನೋಡೆಲ್ ಅಧಿಕಾರಿಗಳ ನೇಮಕ:
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನೆರವೇರಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಯ ಮೇಲ್ವಿಚಾರಣೆ ಮಾಡಲು ಪ್ರತಿ ಗ್ರಾ.ಪಂಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಅರಿಯಡ್ಕ, ಆರ್ಯಾಪು, ಒಳಮೊಗ್ರು ಗ್ರಾ.ಪಂಗಳಿಗೆ-ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಕೆಯ್ಯೂರು, ಕೆದಂಬಾಡಿ, ಕೊಳ್ತಿಗೆ ಗ್ರಾ.ಪಂಗಳಿಗೆ-ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ, ನರಿಮೊಗರು, ಮುಂಡೂರು ಗ್ರಾ.ಪಂಗೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ, ನಿಡ್ಪಳ್ಳಿ, ಬೆಟ್ಟಂಪಾಡಿ, ಪಾಣಾಜೆ ಗ್ರಾ.ಪಂಗಳಿಗೆ ತಾ.ಪಂ ಸಹಾಯಕ ನಿರ್ದೇಶಕಿ ಶೈಲಜಾ, ೩೪-ನೆಕ್ಕಿಲಾಡಿ, ಉಪ್ಪಿನಂಗಡಿ ಗ್ರಾ.ಪಂಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ., ನೆಟ್ಟಣಿಗೆ ಮುಡ್ನೂರು, ಬಡಗನ್ನೂರು ಗ್ರಾ.ಪಂಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ, ಬನ್ನೂರು, ಕೋಡಿಂಬಾಡಿ ಗ್ರಾ.ಪಂಗೆ ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಬಜತ್ತೂರು, ಹಿರೇಬಂಡಾಡಿ ಗ್ರಾ.ಪಂಗೆ ರಾಜಗೋಪಾಲ, ಕಬಕ, ಕುಡಿಪ್ಪಾಡಿ ಹಾಗೂ ಬಲ್ನಾಡು ಗ್ರಾ.ಪಂಗಳಿಗೆ ಮೀನುಗಾರಿಕಾ ಸಹಾಯಕ ನಿರ್ದೇಶಕ ಮಂಜುಳಾ ಶೆಣೈಯವರನ್ನು ನೇಮಕಗೊಳಿಸಿ ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಆದೇಶಿಸಿದ್ದಾರೆ.
ಪುತ್ತೂರು,ಕಡಬದಲ್ಲಿ 34,000 ಫಲಾನುಭವಿಗಳು
ಗೃಹಲಕ್ಷ್ಮೀ ಯೋಜನೆಗೆ ಪುತ್ತೂರು ಹಾಗೂ ಕಡಬದಲ್ಲಿ ಒಟ್ಟು ಸುಮಾರು 34,000 ಮಂದಿ ನೋಂದಾವಣೆ ಮಾಡಿಕೊಂಡಿರುತ್ತಾರೆ.ಪುತ್ತೂರಿನಲ್ಲಿ ಸುಮಾರು 19,೦೦೦ ಹಾಗೂ ಕಡಬದಲ್ಲಿ ಸುಮಾರು 15,000 ಮಂದಿ ಫಲಾನುಭವಿಗಳು ನೋಂದಾಯಿಸಿಕೊಂಡಿರುತ್ತಾರೆ.ಮುಖ್ಯಮಂತ್ರಿಯವರು ಚಾಲನೆ ನೀಡಿದ ಬಳಿಕ,ನೋಂದಾವಣೆ ಮಾಡಿಕೊಂಡಿರುವ ಫಲಾನುಭವಿಗಳ ಖಾತೆಗೆ ಏಕಕಾಲದಲ್ಲಿ ಹಣ ಜಮೆಯಾಗಿರುವ ಬಗ್ಗೆ ಮೊಬೈಲ್ ಸಂದೇಶ ಬರಲಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಾಹಿತಿ ನೀಡಿದ್ದಾರೆ.
ಕಡಬ ತಾಲೂಕಿನ ಗ್ರಾಮ ಪಂಚಾಯತ್ನಲ್ಲಿ `ಗೃಹಲಕ್ಷ್ಮೀ’ ನೊಡೆಲ್ ಅಧಿಕಾರಿಗಳ ನೇಮಕ
ಕಾಣಿಯೂರು: ಕಡಬ ಪಟ್ಟಣ ಪಂಚಾಯತ್ನ ಸಭಾಭವನದಲ್ಲಿ ಹಾಗೂ ಕೋಡಿಂಬಾಳದಲ್ಲಿ ಎಲ್.ಇ.ಡಿ. ಪರದೆಯ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಗ್ರಾ.ಪಂ.ಗಳಲ್ಲಿಯೂ ಕಾರ್ಯಕ್ರಮದ ನೇರ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ. ಕಡಬ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳಿಗೆ ಕಾರ್ಯಕ್ರಮದ ಪೂರ್ಣ ಸಿದ್ಧತೆಯ ಮೇಲ್ವಿಚಾರಣೆ ಮಾಡಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಐತ್ತೂರು ಗ್ರಾ.ಪಂಗೆ ಪುತ್ತೂರು ವಿಭಾಗ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ರೂಪ್ಲ ನಾಯಕ್, ಅಲಂಕಾರು ಗ್ರಾ.ಪಂಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಬಳ್ಪ ಗ್ರಾ.ಪಂ.ಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಬೆಳಂದೂರು ಗ್ರಾ.ಪಂ,ಗೆ ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್, ಬಿಳಿನೆಲೆ ಗ್ರಾ.ಪಂ.ಗೆ ಸುಬ್ರಹ್ಮಣ್ಯ ವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಮೋದ್ ಕುಮಾರ್, ಗೋಳಿತ್ತೊಟ್ಟು ಗ್ರಾ.ಪಂ.ಗೆ ಕಡಬ ಮೆಸ್ಕಾಂ ಉಪವಿಭಾಗ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್,ಕಾಣಿಯೂರು ಗ್ರಾ.ಪಂ,ಗೆ ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್, ಕೌಕ್ರಾಡಿ ಗ್ರಾ.ಪಂ.ಗೆ ಪುತ್ತೂರು ವಿಭಾಗ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಎಂ.ಬಿ, ಕೊಯಿಲ ಗ್ರಾ.ಪಂಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಕೊಂಬಾರು ಗ್ರಾ.ಪಂ.ಗೆ ಸುಬ್ರಹ್ಮಣ್ಯ ವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಮೋದ್ ಕುಮಾರ್, ಕಡ್ಯ-ಕೊಣಾಜೆ ಗ್ರಾ.ಪಂಗೆ ಪುತ್ತೂರು ವಿಭಾಗ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ರೂಪ್ಲ ನಾಯಕ್, ಕುಟ್ರುಪಾಡಿ ಗ್ರಾ.ಪಂ.ಗೆ ಕಡಬ ಮೆಸ್ಕಾಂ ಉಪವಿಭಾಗ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್, ಮರ್ದಾಳ ಗ್ರಾ.ಪಂ.ಗೆ ಪುತ್ತೂರು ವಿಭಾಗ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ರೂಪ್ಲ ನಾಯಕ್, ನೆಲ್ಯಾಡಿ ಗ್ರಾ.ಪಂ.ಗೆ ಪುತ್ತೂರು ವಿಭಾಗ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಭರತ್ ಎಂ.ಬಿ, ನೂಜಿಬಾಳ್ತಿಲ ಗ್ರಾ.ಪಂ.ಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಪೆರಾಬೆ ಗ್ರಾ.ಪಂಗೆ ಕಡಬ ಮೆಸ್ಕಾಂ ಉಪವಿಭಾಗ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್, ರಾಮಕುಂಜ ಗ್ರಾ.ಪಂ.ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಸವಣೂರು ಗ್ರಾ.ಪಂ.ಗೆ ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್, ಸುಬ್ರಹ್ಮಣ್ಯ ಗ್ರಾ.ಪಂ.ಗೆ ಸುಬ್ರಹ್ಮಣ್ಯ ವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಮೋದ್ ಕುಮಾರ್, ಶಿರಾಡಿ ಗ್ರಾ.ಪಂ.ಗೆ ಪುತ್ತೂರು ವಿಭಾಗ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಎಂ.ಬಿ, ಎಡಮಂಗಲ ಗ್ರಾ.ಪಂ.ಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡರವರನ್ನು ನೇಮಕ ಮಾಡಲಾಗಿದೆ.
೨/೩ ಗ್ರಾ.ಪಂ,.ಗೆ ಒಬ್ಬರೇ ನೊಡೆಲ್ ಅಧಿಕಾರಿ: ಕಡಬ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳಿಗೆ ಗೃಹಲಕ್ಷ್ಮೀ ಯೋಜನೆ ಚಾಲನಾ ಕಾರ್ಯಕ್ರಮದ ಪೂರ್ಣ ಸಿದ್ಧತೆಯ ಮೇಲ್ವೀಚಾರಣೆ ಮಾಡಲು ನೊಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೆಲವು ಅಧಿಕಾರಿಗಳಿಗೆ ಎರಡು, ಮೂರು ಗ್ರಾ.ಪಂ.ಗಳ ಜವಾಬ್ದಾರಿ ವಹಿಸಲಾಗಿದೆ.