




ಪುತ್ತೂರು: ಭಾರತೀಯ ವಾಯಸೇನೆ ನಡೆಸಿದ ಪರೀಕ್ಷೆ ಮತ್ತು ಎಸ್‌ಎಸ್‌ಬಿ ಸಂದರ್ಶನದಲ್ಲಿ ಉತ್ತೀರ್ಣರಾಗಿ ವಾಯುಸೇನೆಗೆ ಆಯ್ಕೆಯಾದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಗಳೀರ್ವರಿಗೆ ಡಿ. 16 ರಂದು ಅಭಿನಂದನಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.



ಆಶೀಶ್ ಶಂಕರ್
ವೆಂಕಟಕೃಷ್ಣ ಮತ್ತು ಸುಜಾತ ದಂಪತಿ ಪುತ್ರ ಆಶೀಶ್ ಶಂಕರ್ ರವರು ವಾಯುಸೇನೆ ಪರೀಕ್ಷೆ ಮತ್ತು ಸಂದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ 27ನೇ ರ್ಯಾಂಕ್‌ನೊಂದಿಗೆ ಫ್ಲೈಯಿಂಗ್ ಆಫೀಸರ್ ಆಗಿ ಹುದ್ದೆಗೆ ಆಯ್ಕೆಯಾಗಿರುತ್ತಾರೆ. ಇಂಜಿನಿಯರ್ ಪದವೀಧರರಾಗಿರುವ ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಮಾಡಿರುತ್ತಾರೆ.





ಕೀರ್ತನ್ ಕೆ.ಎಸ್.
ಪದ್ಮಯ್ಯ ಗೌಡ ಮತ್ತು ಪುಷ್ಪಲತಾ ದಂಪತಿ ಪುತ್ರನಾಗಿರುವ ಕೀರ್ತನ್ ಕೆ.ಎಸ್. ರವರು ವಾಯುಸೇನೆಯ ಏರ್‌ಮ್ಯಾನ್ ಆಗಿ ನೇಮಕಗೊಂಡಿರುತ್ತಾರೆ. ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಮಾಡಿರುತ್ತಾರೆ.










