ನಗರಸಭೆ ಬಿಜೆಪಿ ಆಡಳಿತದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ – ಕೆ.ಜೀವಂಧರ್ ಜೈನ್
ಪುತ್ತೂರು: ಬನ್ನೂರು ನಗರಸಭೆ ಸದಸ್ಯೆ ಮೋಹಿನಿ ವಿಶ್ವನಾಥ್ ಅವರ ವಾರ್ಡ್ನಲ್ಲಿ ಕಾಂಕ್ರೀಟಿಕರಣಗೊಂಡ ಮಹಾಲಕ್ಷ್ಮೀ ಮಂದಿರ ಕಡೆ ಹೋಗುವ ರಸ್ತೆಯನ್ನು ಆ.30ರಂದು ಉದ್ಘಾಟಿಸಲಾಯಿತು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಕಾಂಕ್ರೀಟಿಕರಣ ರಸ್ತೆ ಉದ್ಘಾಟಿಸಿ ಮಾತನಾಡಿ, ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಬಿಜೆಪಿ ಸರಕಾರ ಇರುವ ಸಂದರ್ಭ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲಾ ಒಳರಸ್ತೆಗಳನ್ನು ಕಾಂಕ್ರೀಟಿಕರಣ ರಸ್ತೆಯನ್ನಾಗಿ ಮಾಡಬೇಕೆಂಬ ಚಿಂತನೆಯಂತೆ ಎಲ್ಲಾ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುತ್ತಾ ಬರಲಾಗಿದೆ. ಬೇರೆ ಬೇರೆ ಅನುದಾನಗಳನ್ನು ಬಳಸಿಕೊಂಡು ಪುತ್ತೂರಿನ 31 ವಾರ್ಡ್ಗಳನ್ನೂ ಅಭಿವೃದ್ಧಿ ಮಾಡುತ್ತಾ ಬರಲಾಗಿದೆ.
ನಗರತ್ಥೋನದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎಲ್ಲಾ ವಾರ್ಡ್ಗಳಿಗೆ ರೂ. 25ಲಕ್ಷ ಅನುದಾನ ನೀಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಸರಕಾರ ಬದಲಾವಣೆ ಆದ ಸಂದರ್ಭದಲ್ಲಿ ಒಂದು ಬಾರಿ ತಡೆ ಹಿಡಿಯುವ ಕೆಲಸ ಆದರೂ ಈಗ ಮತ್ತೆ ಆ ಕೆಲಸಗಳನ್ನು ಮಾಡುವ ಸೂಚನೆ ಮೇರೆಗೆ ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿದೆ. ಒಟ್ಟಿನಲ್ಲಿ ನಗರಸಭೆ ಬಿಜೆಪಿ ಆಡಳಿತದಿಂದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು. ಸ್ಥಳೀಯ ಹಿರಿಯರಾದ ಭುಜಂಗ ಆಚಾರ್ಯ ಮತ್ತು ರವೀಂದ್ರ ಆಚಾರ್ಯ ದೀಪ ಪ್ರಜ್ವಲಿಸಿ, ತೆಂಗಿನಕಾಯಿ ಒಡೆದು ರಸ್ತೆ ಲೋಕರ್ಪಾಣೆಗೊಳಿಸಿದರು. ಈ ಸಂದರ್ಭ ನಗರಸಭೆ ಸದಸ್ಯೆ ಗೌರಿ ಬನ್ನೂರು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೋಪಾಲ್, ಓಂಕಾರ್ ಸ್ವೀಟ್ಸ್ನ ಮಲಕ ಚಂದ್ರ, ಪ್ರದೀಪ್ ಗೌಡ, ಚಿದಾನಂದ, ಪೂಜಾ ವಾಗ್ಲೆ, ಭುವನ, ಸರೋಜ, ಅಶೋಕ್, ಶಾಲಿನಿ, ಅಕ್ಬರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಸ್ವಾಗತಿಸಿ, ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ವಂದಿಸಿದರು.