ಸೆ.2: ಆಲಂಕಾರು ಮುರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

0

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಎನ್. ಮುತಪ್ಪ ಪೂಜಾರಿ ನೈಯ್ಯಲ್ಗರವರ ಅಧ್ಯಕ್ಷತೆಯಲ್ಲಿ ಸೆ.2ರಂದು ಪೂರ್ವಾಹ್ನ 10.00ಕ್ಕೆ ಆಲಂಕಾರಿನಲ್ಲಿರುವ ಕೇಂದ್ರ ಕಚೇರಿಯ ಬ್ಯೆದಶ್ರೀ ಸಭಾಭವನದಲ್ಲಿ ನಡೆಯಲಿದೆ.


ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಳ ಬಿ. ಸಿ ರೋಡ್ ಇದರ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ಮತ್ತು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘವು ಆಲಂಕಾರಿನಲ್ಲಿ ಸ್ವಂತ ನಿವೇಶನದ ಕಟ್ಟಡ ಬೈದಶ್ರೀ ಸಹಕಾರ ಸೌಧದಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಮತ್ತು ಕೊಯಿಲದಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆಗಳಿವೆ. 2022-2023ನೇ ಸಾಲಿನಲ್ಲಿ 176.92 ಕೋಟಿ ವ್ಯವಹಾರ ನಡೆಸಿ, 72.15 ಲಕ್ಷ ನಿವ್ವಳ ಲಾಭಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ 10 ವರ್ಷಗಳಿಂದ ಸತತವಾಗಿ ‘ಎ’ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ.


ಪ್ರತಿಭಾ ಪುರಸ್ಕಾರ:
ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಗುವುದು. ಎಸ್.ಎಸ್.ಎಲ್.ಸಿ ಯಲ್ಲಿ 611 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಮರ್ದಾಳ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಧನ್ಯ, 610 ಅಂಕ ಪಡೆದು ದ್ವಿತಿಯ ಸ್ಥಾನ ಪಡೆದ ಕಡಬ ಸರಕಾರಿ ಪ್ರೌಢಶಾಲೆಯ ಆಯಿಷತ್ ಮುಫಿದಾ, ಪಿಯುಸಿ ಕಲಾ ವಿಭಾಗದಲ್ಲಿ 553 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ.ಕಾಲೇಜಿನ ದೀಕ್ಷಾ, 551 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ರುಕ್ಸಾನ ಜಾಸ್ಮಿನ್, ಪಿಯುಸಿ ವಾಣಿಜ್ಯ ವಿಭಾಗದಲ್ಲಿ 585 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕಡಬ ಸ್ಯೆಂಟ್ ಜೋಕಿಮ್ಸ್ ಪ.ಪೂ.ವಿದ್ಯಾಲಯದ ಸಂಗೀತಾ, 573 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸುಶಾಂತ್, ಪಿಯುಸಿ ವಿಜ್ಞಾನ ವಿಭಾಗದಲ್ಲಿ 576 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಹನಾ ಸಿ.ಎಸ್, 573 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಂಧ್ಯಾ ಎ, ಮತ್ತು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಕಾಂ ನಲ್ಲಿ 85.14% ಅಂಕ ಪಡೆದು ಪ್ರಥಮ ಸ್ಥಾನ ಪಡೆದ ದಿಶಾ ಬಿ, 84.68% ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಗಣೇಶ, ಬಿ.ಎ.ಯಲ್ಲಿ 75.10% ಅಂಕ ಪಡೆದು ಪ್ರಥಮ ಸ್ಥಾನ ಪಡೆದ ರಕ್ಷಾ ಎಮ್.ಟಿ, ದ್ವಿತೀಯ ಸ್ಥಾನ ಪಡೆದ ನಿಖೇಶ್ ಎನ್. ಶೆಟ್ಟಿರವರನ್ನು ಗೌರವಿಸಲಾಗುವುದು.


ದತ್ತಿನಿಧಿ ವಿದ್ಯಾರ್ಥಿ ವೇತನ:
ಸಂಘದ ಸದಸ್ಯರ ಮಕ್ಕಳ ಪ್ಯೆಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ದಿ. ನೆಯ್ಯಲ್ಗ ಗಿರಿಯಪ್ಪ ಪೂಜಾರಿ, ದಿ. ನೆಯ್ಯಲ್ಗ ದೇರಣ್ಣ ಪೂಜಾರಿ ಮತ್ತು ದಿ. ನೆಯ್ಯಲ್ಗ ಪದ್ಮಾವತಿ, ಕೇರ್ಪುಡೆ ದಿ. ಗುಡ್ಡಪ್ಪ ಪೂಜಾರಿ, ಬದಿಬಾಗಿಲು ದಿ. ಗುಡ್ಡಪ್ಪ ಪೂಜಾರಿ ಮತ್ತು ದಿ. ಶಾಂಭವಿ ಇವರ ಸ್ಮರಣಾರ್ಥ, ಮಾಜಿ ಅಧ್ಯಕ್ಷರಾದ ದಿ. ಚಂದ್ರಶೇಖರ ಆಲಂಕಾರು ಇವರ ಸ್ಮರಣಾರ್ಥ, ಇರಂತೊಟ್ಟು ದಿ.ಬಾಬು ಪೂಜಾರಿ ಸ್ಮರಣಾರ್ಥ, ಗೇರ್ತಿಲ ದಿ. ದೇವು ಪೂಜಾರಿ ಇವರ ಸ್ಮರಣಾರ್ಥ, ದಿ. ಜಿನ್ನಪ್ಪ ಪೂಜಾರಿ ದೋಳ ಇವರ ಸ್ಮರಣಾರ್ಥ, ದಿ. ಮತ್ರಾಡಿ ರಾಮಯ್ಯ ಅಮೀನ್ ಮತ್ತು ಸೀತಮ್ಮ ಸ್ಮರಣಾರ್ಥ ಸುಂದರ ಕರ್ಕೇರ ಮತ್ತು ಶ್ಯಾಮಲ, ದಿ.ವೆಳ್ಳಚ್ಚಿ ಕೃಷ್ಣನ್ ಇವರ ಸ್ಮರಣಾರ್ಥ ಅಶೋಕ್ ಗೋಕುಲನಗರ ಕೊಯಿಲ, ದಿ.ಶ್ರೀಮತಿ ಧನಲಕ್ಶ್ಮಿ ಆಲಂಕಾರು ಇವರ ಸ್ಮರಣಾರ್ಥ ಪವಿತ್ರ ಅಮರನಾಥ್, ಬಟ್ಲಡ್ಕ ದಿ. ಮೋನಪ್ಪ ಪೂಜಾರಿ ಮತ್ತು ದಿ. ಮುತ್ತಕ್ಕ ಅವರ ಸ್ಮರಣಾರ್ಥ ಸಂಜೀವ ಪೂಜಾರಿ ಮತ್ತು ಸುಗಂಧಿ ಇವರು ನೀಡುವ ದತ್ತಿನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.


ಸನ್ಮಾನ:
ಸಂಘದ ಹಿರಿಯ ಮೂರ್ತೆದಾರರ ನೆಲೆಯಲ್ಲಿ ಅಣ್ಣಿ ಪೂಜಾರಿ ಪೆರಾಬೆ, ಚಂದಪ್ಪ ಪೂಜಾರಿ ಮಡ್ಯೊಟ್ಟು, ಶ್ರೀಧರ ಪೂಜಾರಿ ತುಂಬೆತ್ತಡ್ಕ ಇವರುಗಳನ್ನು ಮತ್ತು ಹಿರಿಯ ನಾಗರಿಕರ ನೆಲೆಯಲ್ಲಿ ಸೀತಮ್ಮ ನಡುಮನೆ ಮತ್ತು ಮುತ್ತಕ್ಕ ಸಾಯಿ ನಿಲಯ, ಎಣ್ಣೆತ್ತೋಡಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ ಎನ್. ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷರಾದ ವಸಂತ ಪೂಜಾರಿ ಬದಿಬಾಗಿಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗಿಶ್ ಕುಮಾರ್‌ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here