ಪುತ್ತೂರು: ಕೆನಡಾದ ವಿಂಡ್ಸರ್ ಒಂಟಾರಿಯೋದಲ್ಲಿ ಸೆ.13-18ರ ತನಕ ನಡೆಯಲಿರುವ ಕಾಮನ್ ವೆಲ್ತ್ ಲೈಪ್ ಸೇವಿಂಗ್ ಚಾಂಪಿಯನ್ ಶಿಪ್-2023ರಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ ಈಜುಪಟುಗಳಾದ ಸ್ವೀಕೃತ್ ಆನಂದ್, ತ್ರಿಶೂಲ್ ಗೌಡ, ಧನ್ವಿತ್ ಮತ್ತು ನೀಲ್ ಮಸ್ಕರೇನ್ಹಸ್ರವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪುತ್ತೂರಿನ ಈಜು ಕ್ರೀಡಾಪಟುಗಳಾದ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಾದ ಸ್ವೀಕೃತ್ ಆನಂದ್, ತ್ರಿಶೂಲ್ ಗೌಡ, ಅಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಧನ್ವಿತ್ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ನೀಲ್ ಮಸ್ಕರೇನ್ಹಸ್ವರು ಆರು ದಿನಗಳ ಕಾಲ ಕೆನಡಾದಲ್ಲಿ ಆರ್ಎಲ್ಎಸ್ಎಸ್ ಕಾಮನ್ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್ಶಿಪ್ನಲ್ಲಿ ಹಲವಾರು ಜೀವರಕ್ಷಕ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರ ರೋಹಿತ್ ಅವರು ಟೀಮ್ ಇಂಡಿಯಾ ಕೋಚ್ ಆಗಿ ಮುನ್ನಡೆಸಲಿದ್ದಾರೆ. ಅಕ್ವಾಟಿಕ್ ಕ್ಲಬ್ನ ತರಬೇತುದಾರ ಪಾರ್ಥ ವಾರಣಾಸಿ ಮತ್ತು ತಂಡದವರು ಪರ್ಲಡ್ಕ ಡಾ.ಶಿವರಾಮ ಕಾರಂತಬಾಲವನ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.