ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕರ ದಿನಾಚರಣೆ

0

ಸದಸ್ಯರ ಸಹಕಾರದೊಂದಿಗೆ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದೆ ಚಿದಾನಂದ ಬೈಲಾಡಿ

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಸದಸ್ಯರ ಸಹಕಾರದೊಂದಿಗೆ 21 ವರ್ಷಗಳ ಸುದೀರ್ಘ ನಡೆಯಲ್ಲಿ ಸಾಕಷ್ಟು ಸದಸ್ಯರ ಸಹಕಾರದೊಂದಿಗೆ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.


ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್‌ನಲ್ಲಿ ಸ್ವಂತ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಮಾತನಾಡಿದರು. 2002ರಲ್ಲಿ ದಿ.ಜಗನ್ನಾಥ ಬೊಮ್ಮೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಾಗ ನಮ್ಮ ಸಂಸ್ಥೆಯಲ್ಲಿ 600 ಸದಸ್ಯರೊಂದಿಗೆ ರೂ. 3 ಲಕ್ಷ ಪಾಲು ಬಂಡವಾಳವಿತ್ತು. 2022-23ನೇ ಸಾಲಿನಲ್ಲಿ ಸಂಸ್ಥೆ 9 ಶಾಖಗಳನ್ನು ಹೊಂದಿ ಕೊಂಡು 6 ಸಾವಿರ ಸದಸ್ಯರನ್ನು ಹೊಂದಿ, ರೂ. 4ಕೋಟಿಗೂ ಮಿಕ್ಕಿ ಪಾಲು ಬಂಡವಾಳ ಹೊಂದಿದ್ದು, ರೂ. 400ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಸದಾ ಎ ತರಗತಿಯೊಂದಿರುವ ನಮ್ಮ ಸಂಸ್ಥೆಯ ಸ್ಥಾಪಕರಾಗಿದ್ದ ಕೆಲವರು ನಿಧನರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿದ ಅವರು ಇವತ್ತು ಸದಸ್ಯರ ಸಹಕಾರದೊಂದಿಗೆ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು. ಇವತ್ತು ನಮ್ಮ ಪ್ರತೀ ಶಾಖೆಯಲ್ಲಿ ಆಯಾ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಂಸ್ಥಾಪಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.


ಸ್ಥಾಪಕರ ದಿನಾಚರಣೆ ಸಂಘದ ಅರಿವನ್ನು ಮೂಡಿಸುತ್ತದೆ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಮಾತನಾಡಿ ಎಲ್ಲಿ, ಯಾವಾಗ, ಯಾರಿದ್ದಾಗ ಈ ಸಂಸ್ಥೆ ಬೆಳೆಯಿತು ಎಂಬುದು ಮುಖ್ಯ. ಸಂಸ್ಥೆಯನ್ನು ಆರಂಭಿಸಿದವರನ್ನು ಅದಕ್ಕೆ ಕೈ ಜೋಡಿಸಿದವರನ್ನು ನೆನಪಿಸುವ ನೆಲೆಯಲ್ಲಿ ಸ್ಥಾಪಕರ ದಿನಾಚರಣೆ ಅರಿವನ್ನು ಕೊಡುತ್ತದೆ. ಈ ಸಂಸ್ಥೆಯ ಕುರಿತು ನಾನು ಅವಲೋಕಿಸಿದಾಗ ಸಂಸ್ಥೆಗಾಗಿ ಕಷ್ಟಪಟ್ಟವರ ಕುರಿತು ಆಗಾಗ ಮಾತನಾಡುತ್ತಾರೆ ಹೊರತು ಅದನ್ನು ಪ್ರಸ್ತುತ ಪಡಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ನಾನು ಅಧ್ಯಕ್ಷರಿಗೆ ನೀಡಿದ ಸಲಹೆಯನ್ನು ಅವರು ಅನುಷ್ಠಾನಗೊಳಿಸಿದ್ದಾರೆ. ಇದು ಮುಂದಿನ ದಿನ ಸಂಸ್ಥೆಯ ಕುರಿತು ಸದಾ ಎಲ್ಲರಿಗೂ ಮಾಹಿತಿ ನೀಡುತ್ತದೆ ಎಂದರು.


ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಸಕರಾದ ಜಿನ್ನಪ್ಪ ಗೌಡ ಮಳವೇಲು, ರಾಮಕೃಷ್ಣ ಗೌಡ ಕರ್ಮಲ, ಸಂಘದ ಲೆಕ್ಕಪರಿಶೋದನಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ಲಿಂಗಪ್ಪ ಗೌಡ ತೆಂಕಿಲ, ರವಿ ಮುಂಗ್ಲಿಮನೆ, ಸಮುದಾಯ ಭವನದ ಉಸ್ತುವಾರಿ ದಯಾನಂದ ಕೆ.ಎಸ್, ಸುರೇಶ್ ಗೌಡ, ನಾರಾಯಣ ಗೌಡ ಅರುವಾರ, ವಸಂತ ವೀರಮಂಗಲ, ಸೋಮಪ್ಪ ಗೌಡ ಬಾಡಾವು, ದಯಾನಂದ, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಸ್ವಾಗತಿಸಿ, ಪುತ್ತೂರು ಎಪಿಎಂಸಿ ಶಾಖಾ ಪ್ರಬಂಧಕಿ ತೇಜಸ್ವಿನಿ ವಂದಿಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ ಕಟ್ಟಡದಲ್ಲಿ 2002ರಲ್ಲಿ ಆರಂಭಗೊಂಡ ಶಾಖೆಯ ಕಚೇರಿಯಲ್ಲಿ ಬೆಳಿಗ್ಗೆ ಪ್ರಥಮವಾಗಿ ದೀಪ ಬೆಳಗಿಸಲಾಯಿತು. ಈ ಸಂದರ್ಭ ಅಲ್ಲಿನ ಶಾಖಾ ಪ್ರಭಂದಕಿ ನಿಶ್ಚಿತಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here