ಮಾಣಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

0

ವಿಟ್ಲ: ಮಾಣಿ ಮಾದರಿ ಹಿ. ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾಣಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕಿರಿಯ ವಿಭಾಗದ ಖತಿಜ ಸಿಯಾನ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಹಿರಿಯ ವಿಭಾಗದ ಆಸಿಯಾ ಸಿಂಬ್ರಾ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ ಹಾಗೂ ಕಿರಿಯ ವಿಭಾಗದ ಶ್ರೀಕರ ನಾರಾಯಣ ಸಂಸ್ಕೃತ ಪಠಣದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಿರಿಯ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಮಹತಿ ಪಿ. ದ್ವಿತೀಯ ಸ್ಥಾನ ಹಾಗೂ ಕಥೆ ಹೇಳುವುದರಲ್ಲಿ ಶಿಝ ಪಾತಿಮಾ ತೃತೀಯ ಸ್ಥಾನ ಪಡೆದಿದ್ದಾರೆ.

ಹಿರಿಯ ವಿಭಾಗದ ಮುಹಮ್ಮದ್ ರೆಹಾನ್ ಧಾರ್ಮಿಕ ಪಠಣ ತೃತೀಯ , ಪ್ರಿನೀತ್ ಸನೀಲ್ ವಿ. ಮಿಮಿಕ್ರಿಯಲ್ಲಿ ತೃತೀಯ, ಮೋಕ್ಷಿತ ಸಂಸ್ಕೃತ ಪಠಣದಲ್ಲಿ ತೃತೀಯ, ಹಲೀಮ ಶೈಮಾ ಹಿಂದಿ ಕಂಠಪಾಠದಲ್ಲಿ ತೃತೀಯ ಹಾಗೂ ಚಿತ್ರಕಲೆಯಲ್ಲಿ ಕುಶಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here