





ಕರ್ನಾಟಕ ತಂಡದಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ 13 ಈಜುಪಟುಗಳು ಮತ್ತು ತರಬೇತುದಾರ ಭಾಗಿ


ಪುತ್ತೂರು: ಮಹಾರಾಷ್ಟ್ರದ ಪುಣೆಯ ಬಾಳೆವಾಡಿಯ ಛತ್ರಪತಿ ಶಿವಾಜಿ ಮಹಾರಾಜ್ ಕ್ರೀಡಾ ಸಂಕೀರ್ಣದಲ್ಲಿ ಸೆ.3ರಿಂದ 5ರ ತನಕ ಅಂಡರ್ ವಾಟರ್ ಈಜು ಫೆಡರೇಶನ್ ಆಫ್ ಇಂಡಿಯಾ (ಯುಎಸ್ಎಫ್ಐ) ನಡೆಸುವ 3ನೇ ರಾಷ್ಟ್ರೀಯ ಮಟ್ಟದ ನೀರೊಳಗಿನ ಫಿನಿಸ್ವಿಮ್ಮಿಂಗ್ ಚಾಂಪಿಯನ್ಶಿಪ್ನಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ 13 ಈಜುಪಟುಗಳು ಮತ್ತು ತರಬೇತುದಾರ ಕರ್ನಾಟಕ ತಂಡವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ.






ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ 10ನೇ ತರಗತಿ ಪ್ರತೀಕ್ಷಾ ಎನ್.ಶೆಣೈ, ಸುದಾನ ವಸತಿ ಶಾಲಾ 9ನೇ ತರಗತಿ ಅನಿಖಾ ಯು, ಪುತ್ತೂರು, ಅಂಬಿಕಾ ವಿದ್ಯಾಲಯದ ಪ್ರಥಮ ಪಿಯುಸಿಯ ಅನಿಕೇತ್ ಎನ್, ಪುತ್ತೂರು, ಸಂತ ಫಿಲೋಮಿನಾ ಪ್ರೌಢ ಶಾಲಾ 10ನೇ ತರಗತಿಯ ಅನ್ವಿತ್ ರೈ ಬಾರಿಕೆ, ಮೂಡಬಿದರೆ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿ 2ನೇ ಬಿಪಿಎಸ್ನ ರಾಯ್ಸ್ಟೆನ್ ರಾಡ್ರಿಗಸ್, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆರ್. ಅಮನ್ರಾಜ್, ಸಂತ ಫಿಲೋಮಿನಾ ಪ.ಪೂ ಕಾಲೇಜಿನ ಪ್ರಥಮ ಪಿಯುಸಿ ನಂದನ್ ನಾಯಕ್, ಸುದಾನ ಶಾಲಾ 9ನೇ ತರಗತಿಯ ನಿಕೋಲಸ್ ರೋನಿನ್ ಮಥಿಯಾಸ್, ವಿವೇಕಾನಂದ ಸಿಬಿಎಸ್ಇ 7 ತರಗತಿಯ ಲಾಸ್ಯ ಕಿಶನ್, ಉಪ್ಪಿನಂಗಡಿ ಇಂದ್ರಪ್ರಸ್ಥದ 5ನೇ ತರಗತಿಯ ಸಾನ್ವಿ ಸಿ.ಎಚ್., ಸುದಾನ ಶಾಲಾ 7ನೇ ತರಗತಿ ಮಾನ್ವಿ ಡಿ., ಸಂತ ಫಿಲೋಮಿನಾ ಹಿ.ಪ್ರಾ ಶಾಲಾ 7ನೇ ತರಗತಿಯ ಲಿಕಿತ್ ರಾಮಚಂದ್ರ, ಅಂಬಿಕಾ ವಿದ್ಯಾಲಯದ 9ನೇ ತರಗತಿಯ ವರ್ಧಿನ್ ದೀಪಕ್ ರೈ ಮತ್ತು ಈಜು ತರಬೇತುದಾರರಾದ ದೀಕ್ಷಿತ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಕರ್ನಾಟಕ ಅಂಡರ್ ವಾಟರ್ ಸ್ಪೋರ್ಟ್ಸ್ ಮತ್ತು ಫಿನ್ಸ್ ಈಜು ಅಸೋಸಿಯೇಷನ್(ಕೆಯುಎಸ್ಎಫ್ಎ) ಅಡಿಯಲ್ಲಿ ಕರ್ನಾಟಕ ತಂಡವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಈಜುಗಾರರಿಗೆ ಪುತ್ತೂರಿನ ಡಾ.ಶಿವರಾಮ ಕಾರಂತ್ ಬಾಲವನ ಈಜುಕೊಳದಲ್ಲಿ ಕೋಚ್ ಪಾರ್ಥ, ತರಬೇತುದಾರರಾದ ದೀಕ್ಷಿತ್ ಮತ್ತು ರೋಹಿತ್ ರವರು ತರಬೇತಿ ನೀಡುತ್ತಿದ್ದಾರೆ.







