ಪುತ್ತೂರು : ಸಂಜೀವಿನಿ ಸ್ವ ಸಹಾಯ ಸಂಘ ,ಗ್ರಾಮಾಭಿವೃದ್ಧಿ ಸ್ವ ಸಹಾಯ ಸೇವಾ ಪ್ರತಿನಿಧಿ ,ಶ್ರೀ ಶಕ್ತಿ ಸಂಘಗಳ ಪ್ರತಿನಿಧಿ ಹಾಗೂ ಆಶಾ ಕಾರ್ಯಕರ್ತೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ವಿವಾಹಿತ ಮಹಿಳೆಯರಿಗೆ ಉದ್ಯೋಗವಕಾಶವನ್ನು ಕರ್ನಾಟಕ ಸಾವಯವ ಕೃಷಿ ಯೋಜನೆ ವತಿಯಿಂದ ನೇರ ನೇಮಕಾತಿ ಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಸಾವಯವ ಕೃಷಿ ಯೋಜನೆಯೂ ರಾಜ್ಯದ ಪ್ರಮುಖ ಕೃಷಿ ಸಂಸ್ಥೆ ಆಗಿದ್ದು ,ಮಹಿಳೆಯರೇ ಅಧಿಕಾರಿಗಳು ಆಗಿರುವ ಈ ಸಂಸ್ಥೆಯಲ್ಲಿ ದ.ಕ , ಉಡುಪಿ , ಶಿವಮೊಗ್ಗ ,ಚಿಕ್ಕಮಗಳೂರು ,ದಾವಣಗೆರೆ,ಚಿತ್ರದುರ್ಗ ,ಹಾಸನ ಮತ್ತು ತುಮಕೂರು ಜಿಲ್ಲೆಯ ಲ್ಲಿ 150 ಕ್ಕೂ ಹೆಚ್ಚು ಶಾಖೆಯನ್ನು ಒಳಗೊಂಡ ಬೃಹತ್ ಸಂಸ್ಥೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಶಾಖೆ ಆರಂಭಿಸುವ ನಿಟ್ಟಿನಲ್ಲಿ ಈ ಉದ್ಯಗೋವಕಾಶ ಕಲ್ಪಿಸಲಾಗಿದೆ.
ಪ್ರಮುಖ ಸ್ಥಳಗಳಾದ ಸುಬ್ರಹ್ಮಣ್ಯ ,ಕಡಬ ,ಪಂಜ,ಬಲ್ಯ ,ನೆಲ್ಯಾಡಿ ,ಕಲ್ಲುಗುಡ್ಡೆ ,ಶಿರಾಡಿ ,ಉದನೆ ,ಇಂಚ್ಲಪಾಡಿ ,ಅಲಂಕಾರು ,ಕುಂತೂರು ,ರಾಮಕುಂಜ ,ಎಡಮಂಗಲ ,ಕಾಣಿಯೂರು,ಬಿಳಿನೆಲೆ ಹಾಗೂ ಏನೆಕಲ್ಲು ಪ್ರದೇಶಗಳ ಮಹಿಳೆಯರಿಗೆ ಹೆಚ್ಚಿನ ಅವಕಾಶವಿದ್ದು ,ದ್ವಿ ಚಕ್ರ ಇರುವ ಹಾಗೂ ಸಂಜೀವಿನಿ ಸ್ವ ಸಹಾಯ ಸಂಘ ಇದರಲ್ಲಿ ಕಾರ್ಯನಿರ್ವಹಿಸಿರುವವರಿಗೆ ಮೊದಲ ಆದ್ಯತೆಯನ್ನು ಸಂಸ್ಥೆ ಘೋಷಣೆ ಮಾಡಿದೆ. ವಿದ್ಯಾರ್ಹತೆಯೂ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿಯಾಗಿರತಕ್ಕದ್ದು.ವೇತನ ಶ್ರೇಣಿ 17 ಸಾವಿರ ರೂಪಾಯಿಗಳಿಂದ 20 ಸಾವಿರ ವರೆಗೆಯಿದ್ದು ,ಆಸಕ್ತ ಆಭ್ಯರ್ಥಿಗಳು ವಿಳಾಸ ದಾಖಲೆಯ ಜೊತೆ ಕನ್ನಡ ಭಾಷೆಯಲ್ಲಿ ಅರ್ಜಿ ಭರ್ತಿಗೊಳಿಸಿ , ಮೊಬೈಲ್ ಸಂಖ್ಯೆ 7022560060 ವ್ಯಾಟ್ಸಪ್ ಮೂಲಕ ಕಳಿಸಿಕೊಡುವಂತೆಯೂ , ಆ ಬಳಿಕ ಲಿಖಿತ ಪರೀಕ್ಷೇ ಹಾಗೂ ಸಂದರ್ಶನ ಮೂಲಕ ಆಭ್ಯರ್ಥಿಗಳ ಆಯ್ಕೆ ನಡೆಸಲಾಗುವುದೆಂದು ಪ್ರಕಟಣೆ ತಿಳಿಸಿದೆ.