ರಾಮಕ್ಷತ್ರಿಯ ಸಮಾಜದಿಂದ ಕೆಮ್ಮಿಂಜೆ ಅತ್ತಾಳ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ

0

ರಾಮಕ್ಷತ್ರಿಯರು ಒಗ್ಗೂಡಬೇಕು-ಪ್ರಮೋದ್ ನಾಯಕ್
ಯುವಜನರು ಸಂಘಟಿತರಾಗಬೇಕು-ಹರೀಶ್ ಕುಮಾರ್
ಕ್ಷತ್ರಿಯ ಸಮಾಜ ಪ್ರೋತ್ಸಾಹ ಕೊಟ್ಟಿದೆ-ಸುರೇಶ್ ಕುಮಾರ್

ಪುತ್ತೂರು: ಪುತ್ತೂರು ರಾಮಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವೃಂದ, ರಾಮಕ್ಷತ್ರಿಯ ಯುವ ವೃಂದದ ವತಿಯಿಂದ ಕೆಮ್ಮಿಂಜೆ ಅತ್ತಾಳ ಗದ್ದೆಯಲ್ಲಿ ಸೆ.3ರಂದು ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.


ದ.ಕ. ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಪ್ರಮೋದ್ ನಾಯಕ್ ದೀಪ ಪ್ರಜ್ವಲನೆ ಮಾಡಿ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಮಕ್ಷತ್ರಿಯ ಸಮಾಜದ ಮೂಲಕ ಉತ್ತಮ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಯುವಕರು ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇದರ ಮುಖಾಂತರ ನಮ್ಮ ಸಂಘದ ಅಭಿವೃದ್ಧಿ ಆಗುತ್ತದೆ. ರಾಮಕ್ಷತ್ರಿಯ ಸಂಘದ ವಾರ್ಷಿಕೋತ್ಸವದ ಮೂಲಕ ನಾವು ಸಮಾಜವನ್ನು ಒಗ್ಗೂಡಿಸುತ್ತೇವೆ ಎಂದು ಹೇಳಿ ಶುಭಹಾರೈಸಿದರು. ಮಖ್ಯ ಅತಿಥಿ ಮಂಗಳೂರು ವಿಫೋರ್ ಡಿಜಿಟಲ್ ಇನ್ಫೋಟೆಕ್ ನಿರ್ದೇಶಕ ಹರೀಶ್ ಕುಮಾರ್ ಮಾತನಾಡಿ ಇದೊಂದು ಸ್ಫೂರ್ತಿದಾಯಕ ಕ್ರೀಡಾಕೂಟ. ಇಲ್ಲಿ ಯುವಕರ ಸಂಘದ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಯುವ ಜನಾಂಗಕ್ಕೆ ನಮ್ಮ ಜಾತಿ ಧರ್ಮ, ದೇಶದ ಬಗ್ಗೆ ಒಳ್ಳೆಯ ಮನೋಭಾವ ಬೇಕು. ನಮ್ಮಲ್ಲಿ ಹರಿಯುವ ರಕ್ತ ಕ್ಷತ್ರಿಯ ರಕ್ತವಾಗಿದೆ. ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರಾಮಕ್ಷತ್ರಿಯ ಮಾತೃಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ ಮಾತನಾಡಿ ಎಲ್ಲರ ಒಗ್ಗೂಡುವಿಕೆಯಿಂದ ಕಾರ್‍ಯಕ್ರಮ ಸಂಘಟಿತವಾಗಿದೆ. ಯುವಕ ವೃಂದದವರು ಸಂಯೋಜಿಸಿದ್ದಾರೆ. ಅತ್ತಾಳ ಕುಟುಂಬದವರು, ಗದ್ದೆ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಕ್ಷತ್ರಿಯ ಸಮಾಜದವರು ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಕ್ಷಾತ್ರಿಯ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅರುಣ್ ಕುಮಾರ್ ಅಲಂಕಾರ್, ಮಹಿಳಾ ವೃಂದದ ಅಧ್ಯಕ್ಷೆ ರೇಣುಕಾ ನವೀನ್, ಯುವವೃಂದದ ಸಂಯೋಜಕ ಕಾರ್ತಿಕ್ ಹಾರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವರ್ಣ ವರ್ಷ ಪ್ರಾರ್ಥಿಸಿದರು. ರಾಮಕ್ಷತ್ರಿಯ ಯುವವೃಂದದ ಅಧ್ಯಕ್ಷ ಅನೀಶ್ ಕುಮಾರ್ ಸ್ವಾಗತಿಸಿದರು. ಮಹಿಳಾ ವೃಂದದ ಕಾರ್ಯದರ್ಶಿ ರಶ್ಮಿರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಯುವವೃಂದದ ಸದಸ್ಯ ಜೀವನ್ ಅತ್ತಾಳ್ ವಂದಿಸಿ ವಿದ್ಯಾರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಕೆಸರುಗದ್ದೆಯಲ್ಲಿ ಹಾಳೆ ಓಟ, ಹಗ್ಗಜಗ್ಗಾಟ, 3 ಕಾಲಿನ ಓಟ, ಉಪ್ಪು ಮೂಟೆ, ಮಡಿಕೆ ಒಡೆಯುವುದು ಮುಂತಾದ ಸ್ಪರ್ಧೆಗಳು ನಡೆಯಿತು.

ಗಣ್ಯರು ಆರಂಭದಲ್ಲಿ ಕಲಸೆಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯಮಟ್ಟದ ಕ್ರೀಡಾಪಟು ಶ್ರೇಯಸ್ ಕೆ. ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಗೌರವಾರ್ಪಣೆ
ರಾಮಕ್ಷತ್ರಿಯ ಸಮಾಜದ ಸಾಧಕರನ್ನು ಗೌರವಿಸಲಾಯಿತು. ರಾಮಕ್ಷತ್ರಿಯ ಸಂಘ ದ.ಕ.ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಧರ್ಮಪ್ರಕಾಶ್, ಬೆಳ್ತಂಗಡಿ ರಾಮಕ್ಷತ್ರಿಯ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಿಶ್ವನಾಥ ನಾಯಕ್, ಮಾಜಿ ಅಧ್ಯಕ್ಷ ವಿಜಯ ಕುಮಾರ್, ಯುವವೃಂದದ ಸದಸ್ಯ ಸ್ವಸ್ತಿಕ್ ವಿಜಯ್, ಕಾಸರಗೋಡು ರಾಮಕ್ಷತ್ರಿಯ ಯುವವೃಂದದ ಅಧ್ಯಕ್ಷ ಮುರಳೀಧರ್, ಕಾಸರಗೋಡು ರಾಮಕ್ಷತ್ರಿಯ ಸೇವಾ ಸಂಘದ ಉಪಾಧ್ಯಕ್ಷ ಕಾಸರಗೋಡು ಹಾಗೂ ಬೆಂಗಳೂರಿನ ಉದ್ಯಮಿ ನಾಗೇಶ್ ರಾವ್‌ರವರನ್ನು ರಾಮಕ್ಷತ್ರಿಯ ಯುವವೃಂದದ ಅಧ್ಯಕ್ಷ ಅನೀಶ್ ಕುಮಾರ್ ಗೌರವಿಸಿದರು.

LEAVE A REPLY

Please enter your comment!
Please enter your name here