ಬೆಟ್ಟಂಪಾಡಿ: ವಿದ್ಯಾಭಾರತಿ ಕರ್ನಾಟಕ ಕಲಬುರ್ಗಿ ಜಿಲ್ಲೆಯ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಇದರ ಸಹಯೋಗದಲ್ಲಿ ಮಾತೃಛಾಯಾ ಆವರಣದಲ್ಲಿ ಸೆ.1ರಿಂದ 3ರವರೆಗೆ ಆಯೋಜಿಸಿದ ಪ್ರಾಂತೀಯ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ದಲ್ಲಿ ಕಿಶೋರ ವರ್ಗದ ವಿಜ್ಞಾನ ವಿಭಾಗದ ಮಾದರಿ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅನ್ವಿತಾ ಎನ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಈಕೆ ಆರ್ಲಪದವು ಅಕ್ಷತಾ ಹಾಗೂ ಗೋಪಾಲಕೃಷ್ಣ ಭಟ್ ದಂಪತಿ ಪುತ್ರಿಯಾಗಿದ್ದಾರೆ. 10ನೇ ತರಗತಿಯ ಹರ್ಷ ರವರು ಗಣಿತ ಮಾದರಿ ತಯಾರಿಕೆಯಲ್ಲಿ ಭಾಗವಹಿಸಿದ್ದು ಪ್ರೋತ್ಸಾಹಕರ ಬಹುಮಾನ ಪಡೆದಿರುತ್ತಾರೆ. ಈಕೆ ಭಾರತಿ ಚಿದಾನಂದ ರೈ ಗುಮ್ಮಟೆಗದ್ದೆ ಇವರ ಪುತ್ರಿಯಾಗಿದ್ದಾರೆ. ಸಹ ಶಿಕ್ಷಕಿ ಸಂಧ್ಯಾ ಹಾಗೂ ಕೃತಿಕಾ ಇವರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿನಿಯ ಸಾಧನೆಗೆ ಆಡಳಿತ ಮಂಡಳಿ ಹಾಗೂ ಮುಖ್ಯ ಗುರುಗಳು ಅಭಿನಂದಿಸಿದ್ದಾರೆ.