*ರೂ. ೨೮೬ ಕೋಟಿ ವ್ಯವಹಾರ, ರೂ. 78.41 ಲಕ್ಷ ಲಾಭ: ಕಿಶೋರ್ ಕೊಳತ್ತಾಯ
*ನಿವೃತ್ತರಿಗೆ, ಹಿರಿಯ ಸದಸ್ಯರಿಗೆ ಸನ್ಮಾನ ಜ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣೆ
ಪುತ್ತೂರು: ಕಳೆದ 112 ವರ್ಷಗಳಿಂದಲೂ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಲಾಭಗಳಿಸುತ್ತಾ ಬಂದಿದೆ. ವರದಿ ಸಾಲಿನಲ್ಲಿ ಉತ್ತಮ ವ್ಯವಹಾರ ಮಾಡಿ ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ 2022-23ನೇ ಸಾಲಿನಲ್ಲಿ ರೂ. 78,41,310 ಲಾಭಗಳಿಸಿದ್ದು, ಲಾಭವನ್ನು ಉಪನಿಬಂಧನೆ ಪ್ರಕಾರ ಹಂಚಲಾಗಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಕಿಶೋರ್ ಕೊಳತ್ತಾಯ ಯನ್.ಹೇಳಿದರು.
ಅವರು ಸೆ.3ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಸಭಾಭವನದಲ್ಲಿ ನಡೆದ ಬ್ಯಾಂಕ್‌ನ 114ನೇ ವರ್ಷದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸದಸ್ಯರ ಸಲಹೆ ಸೂಚನೆಗಳನ್ನು ಆಲಿಸಿ ಮಾತನಾಡಿದರು. ಕಳೆದ ಮಹಾಸಭೆಯಲ್ಲಿ ಸದಸ್ಯರಿಂದ ಬಂದ ಸಲಹೆಗಳಿಗೆ ಸ್ಪಂದನೆ ನೀಡಿzವೆ ಎಂದ ಅವರು ವರದಿ ವರ್ಷದಲ್ಲಿ ರೂ.286,59,26,718 ಕೋಟಿ ವ್ಯವಹಾರ ನಡೆದಿದೆ. ಬ್ಯಾಂಕ್‌ನಲ್ಲಿ ರೂ. 74.80 ಕೋಟಿ ಠೇವಣಿ ಇದ್ದು, ರೂ. 46.32 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ 114 ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಪ್ರತಿಭಾ ಪುರಸ್ಕಾರ, ಕಿರಿಯ ಸದಸ್ಯರಿಗೆ ಗೌರವಾರ್ಪಣೆ, ಪುಸ್ತಕ ಮೇಳ, ಸಾಹಿತ್ಯ, ಕಲೆ, ಸಂಗೀತ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಸಿಬ್ಬಂದಿಗಳಿಗೆ ಉತ್ತಮ ತರಬೇತಿ ಶಿಬಿರ ನಡೆಸಲಾಗಿದೆ. ಆರ್‌ಬಿಐ ನಿಯಮಾನುಸಾರ ಠೇವಣಿದಾರರಿಗೆ ರೂ. 5 ಲಕ್ಷ ವಿಮೆ ಇದೆ. ಸಾಲಗಾರರಿಗೆ ಅಪಾಘತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಸದಸ್ಯರ ಸಲಹೆಯಂತೆ ಎಟಿಎಮ್‌ಕಾರ್ಡ್, ಗೂಗಲ್ ಪೇಮೆಂಟ್, ಬ್ಯಾಂಕ್‌ನ ಶಾಖೆ ಮಾಡುವ ಚಿಂತನೆಯೂ ಇದೆ. ಅದನ್ನು ಆದಷ್ಟು ಬೇಗ ಮಾಡುವ ಸಂಕಲ್ಪ ಮಾಡಿzವೆ. ಎಲ್ಲದಕ್ಕೂ ಸದಸ್ಯರ ಸಹಕಾರ ಬೇಕೆಂದು ಕಿಶೋರ್ ಕೊಳತ್ತಾಯ ಹೇಳಿದರು.
ಲಾಭಾಂಶ ವಿಂಗಡಣೆ: ಬ್ಯಾಂಕ್‌ನ ಲಾಭದಿಂದ ಕಾಯ್ದಿಟ್ಟ ನಿಧಿಗೆ ರೂ.25,87,632, ಸಹಕಾರ ಶಿಕ್ಷಣ ನಿಧಿಗೆ ರೂ. 1,05,074, ಕ.ರಾ.ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳಿಗೆ ರೂ. 51,486, ಕೆಟ್ಟ ಸಾಲಗಳ ನಿಧಿಗೆ ರೂ. 5 ಲಕ್ಷ, ಕಟ್ಟಡ ನಿಧಿಗೆ ರೂ.4 ಲಕ್ಷ, ಸದಸ್ಯರ ಪರಿಹಾರ ನಿಧಿಗೆ ರೂ. 1 ಲಕ್ಷ, ಸಿಬ್ಬಂದಿ ಪರಿಹಾರ ನಿಧಿಗೆ ರೂ.2 ಲಕ್ಷ, ಸಾರ್ವಜನಿಕ ಕಲ್ಯಾಣ ನಿಧಿಗೆ ರೂ. 1 ಲಕ್ಷ, ಸಾರ್ವಜನೋಪಕಾರ ನಿಧಿಗೆ ರೂ. 1.08 ಲಕ್ಷ, ಸದಸ್ಯರ ಮರಣೋತ್ತರ ನಿಧಿಗೆ ರೂ.3 ಲಕ್ಷ,, ಸಿಬ್ಬಂದಿಗೆ ಬೋನಸ್ ರೂ. 5,58,177, ಜುಬಿಲಿ ನಿಧಿಗೆ ರೂ.1.43 ಲಕ್ಷ, ಲಾಭಾಂಶ ಸಮೀಕರಣ ನಿಧಿಗೆ ರೂ.1ಲಕ್ಷ, ಉಳಿಕೆ ಕ್ಷೇಮ ನಿಧಿಗೆ ರೂ.972 ಅಂತೆ ವಿಂಗಡಣೆ ಮಾಡಲಾಗಿದೆ ಎಂದು ಪ್ರಭಾರ ಮಹಾಪ್ರಬಂಧಕ ಚಿದಂಬರ ಅವರು ಸಭೆಗೆ ತಿಳಿಸಿದರು.
8873 ಸದಸ್ಯರು: ವರ್ಷದ ಆದಿಯಲ್ಲಿ 8,590 ಮಂದಿ ಸದಸ್ಯರಿದ್ದು, 405 ಹೊಸ ಸದಸ್ಯರ ಸೇರ್ಪಡೆಯಾಗಿದ್ದು, 122 ಮಂದಿ ಸದಸ್ಯತನ ತ್ಯಜಿಸಿದ್ದು, ವರ್ಷಾಂತ್ಯದಲ್ಲಿ 8,873 ಸದಸ್ಯರಿದ್ದಾರೆ. 1,793 ಸಹ ಸದಸ್ಯರಿದ್ದಾರೆ. ಸಹ ಸದಸ್ಯರನ್ನೂ ಸದಸ್ಯರನ್ನಾಗಿ ಮಾಡುವ ಚಿಂತನೆ ಇದೆ. ಲೆಕ್ಕಪರಿಶೋಧನೆಯಲ್ಲಿ ಈ ಬಾರಿಯೂ ಬ್ಯಾಂಕ್ ಎ ತರಗತಿ ಪಡೆದಿದೆ ಎಂದು ಬ್ಯಾಂಕ್‌ನ ಪ್ರಭಾರ ಮಹಾಪ್ರಬಂಧಕ ಚಿದಂಬರ ಗೌಡರವರು ವರದಿ ವಾಚನದಲ್ಲಿ ಅಧ್ಯಕ್ಷರ ಪರವಾಗಿ ಮಾತನಾಡಿದರು.
ಸದಸ್ಯರ ಸಲಹೆಗಳು: ಡಿಜಿಟಲ್ ಬ್ಯಾಂಕಿಂಗ್ ಸೇವೆ, ಮೊಬೈಲ್ ಬ್ಯಾಂಕಿಂಗ್, ಎಜ್ಯುಕೇಶನ್ ಲೋನ್, ಎಟಿಎಂ ಸೌಲಭ್ಯ, ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆ ಖಾಲಿ ಇರಬಾರದು, ಬ್ಯಾಂಕಿಗೆ ಶಾಖಾ ವ್ಯವಸ್ಥೆ ಆಗಬೇಕು, ಸಹ ಸದಸ್ಯರನ್ನು ಸದಸ್ಯರನ್ನಾಗಿ ಮಾಡಿ, ಸದಸ್ಯರ ಮತ್ತು ಬ್ಯಾಂಕಿನ ಹಿತಾಸಕ್ತಿಯನ್ನು ಕಾಪಾಡುವ ಕುರಿತು ಬ್ಯಾಂಕ್‌ನ ಸದಸ್ಯರಾದ ಶ್ರೀನಾಥ್, ರಾಜೇಶ್ ಬನ್ನೂರು, ಸುದರ್ಶನ್, ಡಾ.ಮಾಧವ ಭಟ್, ಜನಾರ್ದನ್‌ರವರು ಸಲಹೆ ನೀಡಿದರು.
ನಗುಮೊಗದ ಸೇವೆ, ಸ್ಪಂದನೆ ನಮ್ಮ ಧ್ಯೇಯ: ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಚೇತನ್ ಯು.ಎಸ್ ಅವರು ಸಿಬ್ಬಂದಿಗಳ ಪರವಾಗಿ ಮಾತನಾಡಿ, ಸಿಬ್ಬಂದಿಗಳಿಂದ ಬ್ಯಾಂಕ್‌ನ ಸದಸ್ಯರಿಗೆ ನಗುಮೊಗದ ಸೇವೆಯೊಂದಿಗೆ ಉತ್ತಮ ಸ್ಪಂದನೆ ನೀಡಲಾಗುತ್ತಿದೆ ಎಂದು ತಿಳಿಸಿ ಬ್ಯಾಂಕ್‌ನಿಂದ ಮುಂದಿನ ದಿನ ಅನುಷ್ಠಾನಕ್ಕೆ ಬರುವ ವೆಬ್‌ಸೈಟ್ ಕುರಿತು ಮಾಹಿತಿ ನೀಡಿದರು.
ನಿವೃತ್ತರಿಗೆ ಸನ್ಮಾನ: ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದಿದ ಅರುಣ್ ಕುಮಾರ್ ಯು.,ಅವರನ್ನು ಬ್ಯಾಂಕ್‌ನ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್‌ನ ಕಿರಿಯ ಸಹಾಯಕಿ ಮಮತ ಸನ್ಮಾನಿತರನ್ನು ಪರಿಚಯಿಸಿದರು.
ಹಿರಿಯ ಸದಸ್ಯರಿಗೆ ಸನ್ಮಾನ: ಬ್ಯಾಂಕಿನ ಹಿರಿಯ ಸದಸ್ಯರಾದ ಬಾಲಕೃಷ್ಣ ಗೌಡ, ವಾಸುದೇವ ಆಚಾರ್ಯ, ಕಸ್ತೂರಿ, ಲೋಕೇಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ಸುಬ್ರಾಯ ಗೌಡ ಮತ್ತು ಕೃಷ್ಣ ಗೌಡ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಲಾಯಿತು. ಬ್ಯಾಂಕ್‌ನ ನಿರ್ದೇಶಕರಾದ ಹೇಮಾವತಿ, ಜಯಂತಿ, ಚಂದ್ರಶೇಖರ ಗೌಡ, ಸದಾಶಿವ ಪೈ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಪೈಕಿ ಲೋಕೇಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಯಾಂಕಿಂಗ್ ಡಿಪ್ಲೋಮಾ ಇನ್ ಕೋ ಓಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಬ್ಯಾಂಕ್‌ನ ಹಿರಿಯ ಸಹಾಯಕ ಗಿರೀಶ್‌ರಾಜ್ ಮತ್ತು ಎ ಗ್ರೇಡ್ ಪಡೆದ ಬ್ಯಾಂಕಿನ ಪ್ರಭಾರ ಮಹಾಪ್ರಬಂಧಕ ಚಿದಂಬರ ಗೌಡ ಮತ್ತು ಪವನ್ ನಾಯಕ್ ಅವರನ್ನು ಇದೇ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರು ಗೌರವಿಸಿದರು.
ಶತಮಾನೋತ್ಸವ ವಿದ್ಯಾರ್ಥಿವೇತನ: ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಅತ್ಯಂತ ಹೆಚ್ಚು ಅಂಕ ಗಳಿಸಿರುವ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ರಿತೇಶ್ ರೈ ಎಮ್ ಮತ್ತು ನಿಶ್ಮಿತಾ ಅವರಿಗೆ ನೀಡಲಾಯಿತು.
ದಿ.ಮೊಳಹಳ್ಳಿ ಶಿವರಾಯರ ಶತಾಬ್ದಿಯ ವಿದ್ಯಾರ್ಥಿವೇತನ: ಬ್ಯಾಂಕಿನ ಮೂಲ ಸ್ಥಾಪಕರಲ್ಲಿ ಒಬ್ಬರಾದ ದಿ.ಮೊಳಹಳ್ಳಿ ಶಿವರಾಯರ ಶತಾಬ್ದಿಯ ಅಂಗವಾಗಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಮೊಳಹಳ್ಳಿ ಅವರಿಂದಲೇ ಸ್ಥಾಪಿಸಲ್ಪಟ್ಟ ಕೊಂಬೆಟ್ಟು ಸ.ಪ.ಪೂ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಶ್ರೇಯ ಎಸ್ ಮತ್ತು ಕೆ.ಈಶಾನಿ ಅವರಿಗೆ ವಿತರಿಸಲಾಯಿತು. ೬ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ನೆಲ್ಲಿಕಟ್ಟೆ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆಯ ನಿಂಗನ ಗೌಡ ಶ್ರೀಮಂತ, ಮಂಜುನಾಥ ಜಗದೀಶ ಮತ್ತು ಬೊಳುವಾರು ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆಯ ಸಿಂಚನಾ ಎಸ್.ಆರ್, ನಿಕಿತಾ ಕೆ ಅವರಿಗೆ ವಿತರಿಸಲಾಯಿತು. ಪುತ್ತೂರು ಪಟ್ಟಣ ಪ್ರದೇಶದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಹಿಮನಿ, ಪದವಿ ಕಲಾ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ರುಚಿತ ಹೆಗ್ಡೆ, ಬಿ.ಎಸ್ಸಿಯಲ್ಲಿ ಅಪೂರ್ವ ಜಿ, ಬಿ.ಕಾಂ ನಲ್ಲಿ ಆಕಾಂಕ್ಷಾ ಹೆಚ್, ಬಿಬಿಎಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಹರ್ಷಿತಾ ಕೆ, ಕಾನೂನು ಪದವಿಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಲಾಲ್ ರುಟ್ ಫೆಲಿ ಮತ್ತು ಸವಿನಯ ಎನ್.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ದಿ.ಬಿ.ಗಣಪತಿ ವಿಷ್ಣು ಹೊಳ್ಳ ಸ್ಕಾಲರ್‌ಶಿಪ್: ದಿ.ಬಿ.ಗಣಪತಿ ವಿಷ್ಣು ಹೊಳ್ಳ ಮತ್ತು ಅವರ ಪತ್ನಿ ಶಾರದಾರವರ ನೆನಪಿನಲ್ಲಿ ನೀಡುವ ಸ್ಕಾಲರ್ ಶಿಪ್‌ನ್ನು ಸಂತ ಫಿಲೋಮಿನಾ ಕಾಲೇಜಿನ ಪಿ.ಹಲೀಮತ್ ಶೈಮಾ ಅವರಿಗೆ ನೀಡಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸುವ ಇಂಜಿನಿಯರಿಂಗ್ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ಜಾಗೃತಿ ನಾಯಕ್ ಮತ್ತು 7ನೇ ರ್‍ಯಾಂಕ್ ಪಡೆದ ದಿವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಪಿ. ಸದಾಶಿವ ಪೈ, ಹೇಮಾವತಿ, ಗಾಯತ್ರಿ, ಜಯಂತಿ, ಕಿರಣ್ ಕುಮಾರ್ ರೈ, ಚಂದ್ರಶೇಖರ್ ಗೌಡ, ನಾರಾಯಣ ಎ.ವಿ, ವಿನೋದ್ ಕುಮಾರ್ ಬಿ, ಮಲ್ಲೇಶ್ ಕುಮಾರ್, ರಮೇಶ್ ನಾಯ್ಕ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನ್ವಿ ಶೆಣೈ ಪ್ರಾರ್ಥಿಸಿದರು, ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಕಿರಿಯ ಸಹಾಯಕ ಪವನ್ ನಾಯಕ್ ಬಿ ಮತ್ತು ಹಿರಿಯ ಸಹಾಯಕಿ ಜ್ಯೋತಿ ಎನ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹಾಯಕರಾದ ಗಿರೀಶ್‌ರಾಜ್, ಕಿರಿಯ ಸಹಾಯಕರಾದ ಮಮತ, ರಮ್ಯ, ಆಶಿಕಾ, ಶ್ರೀಕಾಂತ್, ಅಟೆಂಡರ್‌ಗಳಾದ ಉದಯ ಕುಮಾರ್, ಎಂ.ನಾರಾಯಣ ನಾಕ್, ರುಕ್ಮಯ್ಯರವರು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.
ಬ್ಯಾಂಕ್‌ನ ನೂತನ ವೆಬ್ ಸೈಟ್ ಉದ್ಘಾಟನೆ
ಪುತ್ತೂರು ಟೌನ್ ಬ್ಯಾಂಕ್ ಎಂಬ ನಾಮಾಂಕಿತದಲ್ಲಿನ ಬ್ಯಾಂಕ್‌ನ ನೂತನ ವೆಬ್ ಸೈಟ್ ಅನ್ನು ಬ್ಯಾಂಕ್‌ನ ಅಧ್ಯಕ್ಷ ಕಿಶೋರ್ ಕುಮಾರ್ ಕೊಳತ್ತಾಯರವರು ಉದ್ಘಾಟಿಸಿದರು. ಈ ವೆಬ್‌ಸೈಟ್‌ನಲ್ಲಿ ಬ್ಯಾಂಕ್‌ನ ಎಲ್ಲಾ ಅಂಕಿ ಅಂಶಗಳನ್ನು ಪಡೆಯಬಹುದು. ಬ್ಯಾಂಕ್‌ನ ಅಭಿವೃದ್ಧಿ ದೃಷ್ಟಿಯಿಂದ ಈ ವೆಬ್ ಸೈಟ್ ಮೂಲಕ ಸಲಹೆಯನ್ನೂ ನೀಡಬಹುದು ಎಂದು ಅಧ್ಯಕ್ಷರು ತಿಳಿಸಿದರು.
ನೆಟ್ ಪ್ರಾಫಿಟ್ ರೂ.1 ಕೋಟಿಗೆ ಮೀರಿಸುವ ಗುರಿ
ಸಹಕಾರಿ ದಿಗ್ಗಜ ದಿ.ಮೊಳಹಳ್ಳಿ ಶಿವರಾಯ ಅವರಿಂದ ಸ್ಥಾಪಿಸಲ್ಪಟ್ಟ ಈ ಬ್ಯಾಂಕ್ 114ನೇ ವರ್ಷ ಪೂರೈಸಿ ಸರ್ವಕಾಲಿಕ ಗರಿಷ್ಠ ಲಾಭ ಗಳಿಸಿ ಮುಂದುವರಿಯುತ್ತಿದೆ. ಇವತ್ತು ಎಸ್‌ಸಿಡಿಸಿಸಿ ಬ್ಯಾಂಕ್, ಶಾಲೆಗಳು ಬೆಳೆದು ನಿಲ್ಲಲ್ಲು ಅವರ ದೂರದರ್ಶಿತ್ವ ಕಾರಣ. ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಭಾರತ ಸ್ವರ್ಣಯುಗದಲ್ಲಿದೆ. ದೇಶದ ಜಿಡಿಪಿ 2022-23ಕ್ಕೆ 3.5 ಡಾಲರ್ ಅಗಿದ್ದು, 2026-27ನೇ ಅವಧಿಗೆ 5 ಮೀಲಿಯನ್ ಡಾಲರ್ ಮಟ್ಟಕ್ಕೆ ತಲುಪಿ ಜಗತ್ತಿನ 3ನೇ ಸ್ಥಾನಕ್ಕೆ ತಲುಪುಲಿದೆ ಎಂದು ಐಎಂಎಫ್ ಸಂಸ್ಥೆ ತಿಳಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಕೂಡಾ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ನಾವು ಕೂಡಾ ಹಲವು ಪ್ರಥಮಗಳನ್ನು ನೀಡುತ್ತಾ ಬಂದಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಗ್ರಾಸ್ ಪ್ರಾಫಿಟ್ ರೂ. 1 ಕೋಟಿ ಮೀರಿದೆ. ನೆಟ್ ಪ್ರಾಫಿಟ್ ರೂ.75ಲಕ್ಷ ಮೀರಿದೆ. ಮುಂದಿನ ವರ್ಷಕ್ಕೆ ನೆಟ್ ಪ್ರಾಪಿಟ್ ಅನ್ನು 1 ಕೋಟಿ ಮೀರಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕಿಶೋರ್ ಕುಮಾರ್ ಕೊಳತ್ತಾಯ ಹೇಳಿದರು.