ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ

0

ಅಧ್ಯಕ್ಷರಾಗಿ ತೃತೀಯ ಬಿ.ಎ ನವನೀತ್, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಕಾಂ ಪ್ರಿಯಾಲ್ ಆಳ್ವ ಆಯ್ಕೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ನಡೆಯಿತು. ಅಂತಿಮ ಬಿ.ಎ. ವಿದ್ಯಾರ್ಥಿ ನವನೀತ್ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಬಿಳಿಯೂರಿನ ಬಾಲಕೃಷ್ಣ ಪೂಜಾರಿ ಹಾಗೂ ವನಿತಾ ದಂಪತಿ ಪುತ್ರ. ಕಾರ್ಯದರ್ಶಿಯಾಗಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪ್ರಿಯಾಲ್ ಪಿ ಆಳ್ವ ಆಯ್ಕೆಯಾದರು. ಇವರು ಬಿಳಿಯೂರುಕಟ್ಟೆಯ ದಿ.ಎ.ಎಂ.ಪ್ರಮೋದ್ ಚಂದ್ರ ಆಳ್ವ ಹಾಗೂ ಶಾಂತಿ ಪಿ. ಆಳ್ವ ದಂಪತಿ ಪುತ್ರಿ.


ಈ ಸಂದರ್ಭದಲ್ಲಿ ತರಗತಿ ಪ್ರತಿನಿಧಿಗಳ ಆಯ್ಕೆ ನಡೆಯಿತು. ಪ್ರಥಮ ಬಿ.ಎಯಿಂದ ಕುಂದಾಪುರದ ಬಾಲಕೃಷ್ಣ ಹಾಗೂ ರೋಹಿಣಿ ದಂಪತಿ ಪುತ್ರಿ ಮಾನ್ಯ, ದ್ವಿತೀಯ ಬಿ.ಎಯಿಂದ ಇರ್ದೆಯ ಸುಂದರ ಜಿ. ಹಾಗೂ ಸುಂದರಿ ದಂಪತಿ ಪುತ್ರ ಗುರುಪ್ರಸಾದ್, ತೃತೀಯ ಬಿ.ಎಯಿಂದ ಕಾಸರಗೋಡಿನ ಬಾಯಾರಿನ ರವೀಶ ಎ ಹಾಗೂ ನಿರ್ಮಲಾ ಜಿ ದಂಪತಿ ಪುತ್ರಿ ಅಂಕಿತಾ, ಪ್ರಥಮ ಬಿ.ಕಾಂನಿಂದ ಕಾಸರಗೋಡಿನ ಯೇತಡ್ಕದ ಗೋಪಾಲಕೃಷ್ಣ ಭಟ್ ಹಾಗೂ ಸೀತಾಲಕ್ಷ್ಮಿ ದಂಪತಿ ಪುತ್ರಿ ಶ್ರೀಲಕ್ಷ್ಮೀ, ದ್ವಿತೀಯ ಬಿ.ಕಾಂನಿಂದ ಚಿಕ್ಕಮೂಡ್ನೂರಿನ ಎನ್.ವಿಶ್ವನಾಥ್ ರೈ ಹಾಗೂ ಸತ್ಯವತಿ ವಿ ರೈ ದಂಪತಿ ಪುತ್ರಿ ಶರಣ್ಯಾ ಎನ್ ಹಾಗೂ ಅಂತಿಮ ಬಿ.ಕಾಂನಿಂದ ಸುಳ್ಯದ ಕುರುಂಜಿಬಾಗ್‌ನ ಚಿದಾನಂದ ಎಂ.ಆರ್ ಹಾಗೂ ಭಾರತಿ ಎಂ ದಂಪತಿ ಪುತ್ರಿ ಶ್ರೀರಾಮ ಮೋಂಟಡ್ಕ ಅವಿರೋಧವಾಗಿ ಆಯ್ಕೆಯಾದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಮುಖ್ಯ ಚುನಾವಣಾಧಿಕಾರಿ ಚಂದ್ರಕಾಂತ ಗೋರೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ, ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಕನ್ನಡ ಉಪನ್ಯಾಸಕ ಗಿರೀಶ ಭಟ್ ಕೂವೆತ್ತಂಡ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ವಾಣಿಜ್ಯ ಉಪನ್ಯಾಸಕಿ ವೀಣಾ ಶಾರದಾ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಅಡಿಕೆಹಿತ್ಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here