ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗಕ್ಕೆ ಶೇಕಡಾ 100 ಫಲಿತಾಂಶ

0

ಸವಣೂರು : ಜುಲೈ-ಆಗಸ್ಟ್ 2023ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಮತ್ತು ವಾಣಿಜ್ಯ ವಿಭಾಗದಲ್ಲಿ 75% ಫಲಿತಾಂಶವನ್ನು ದಾಖಲಿಸಿದೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸೌಮ್ಯ ಎಸ್.ವಿ(84.22%), ಅನುಷಾ ಕೆ.ಟಿ (83.44 %), ಬುಶ್ರಾ (82.22%), ಶ್ವೇತಾ ಕೆ.ವಿ(80.44%), ಬೃಂದಾ ಕೆ.ಆರ್ (79%), ರಕ್ಷಿತಾ ಎ (78.22%), ಹೈದರ್(76.55%), ಭೂಮಿತಾ ಬಿ (75.88%), ಅಸ್ಮಾ(73.11%), ನಿಶ್ಮಿತಾ ಕೆ.ಸಿ(72.44%) ಗಾಯತ್ರಿ ಬಿ.ಎಸ್(71.77%), ಧನ್ಯಕುಮಾರಿ ಎಂ (70.66%) ವನಿತಾ ಪಿ (70.22%), ಮತ್ತು ಬಿ.ಎ ವಿಭಾಗದ ವಿದ್ಯಾರ್ಥಿಗಳಾದ ಕೌಶಲ್ಯ ಕೆ (78.77%), ವರ್ಷಾ ಎಚ್.ಎಲ್ (70.77%) ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ,ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರ ಡಾ. ನಾರಾಯಣ ಮೂರ್ತಿ ಕೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here