





ಪುತ್ತೂರು: ಕೃಷಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಂಡವೊಂದು ಕೊಳವೆಬಾವಿಯ ಪೈಪ್, ಕೇಬಲ್, ಮೋಟಾರ್ ಪಂಪ್ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇಡ್ಕಿದು ಗ್ರಾಮದ ಡಿ.ವೆಂಕಟ್ರಮಣ ಭಟ್ ಅವರ ಖಾಸಗಿ ಕೃಷಿ ಜಮೀನಿಗೆ ಕ್ಯಾತ್ಯಾಯನಿ ಕೆ ಮತ್ತು ಅವರೊಂದಿಗೆ ಕೆಲಸಗಾರರು ಸೆ.6ರಂದು ಅಕ್ರಮ ಪ್ರವೇಶ ಮಾಡಿ ಕೊಳವೆ ಬಾವಿಯ ಪೈಪು, ಕೇಬಲ್ ಮತ್ತು ಮೋಟರ್ ಪಂಪ್ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು ರೂ.1ಲಕ್ಷ ಮೌಲ್ಯದ ಸೊತ್ತು ಕಳವು ಮಾಡಿದ್ದಾರೆಂದು ಡಿ.ವೆಂಕಟ್ರಮಣ ಭಟ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













