ಮುದ್ಯ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.19ರಂದು ನಡೆಯುವ ದಶಸಂಭ್ರಮ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.


ಕಾಂಚನ ಹೋಟೆಲ್‌ನ ಮಾಲಕರಾದ ಶಂಕರನಾರಾಯಣ ನಾಯಕ್‌ರವರು ಉದ್ಘಾಟಿಸಿದರು. ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಡುಪ, ಹಾಗೂ ನಾಗರಾಜ್ ಗಾಣದಮೂಲೆ ಇವರ ನೇತೃತ್ವದಲ್ಲಿ ಪೂಜಾವಿಧಿ ವಿಧಾನ ನಡೆಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುಚೆಚ್ಚಾರು ಅವರು ಮಾತನಾಡಿ, ಗಣೇಶೋತ್ಸವದ ದಶಸಂಭ್ರಮವು ಅತ್ಯಂತ ಶಿಸ್ತುಬದ್ಧವಾಗಿ ನಡೆಯಬೇಕು. ಈ ಉತ್ಸವದಲ್ಲಿ ಊರಿನವೆರೆಲ್ಲರೂ ಪಾಲ್ಗೊಳ್ಳಬೇಕೆಂದು ಹೇಳಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡ ಸ್ವಾಗತಿಸಿದರು. ಸದಸ್ಯ ಗಣೇಶ್‌ಕುಲಾಲ್ ವಳಾಲು ವಂದಿಸಿದರು.


ಸಮಿತಿಯ ಕಾರ್ಯದರ್ಶಿ ಧನಂಜಯ ಬಾರಿಕೆ, ಅವಿನಾಶ್ ಉಪಾತಿಪಾಲು, ಕೋಶಾಧಿಕಾರಿ ಸೀತಾರಾಮ ಶೇಡಿ, ಗೌರವಾಧ್ಯಕ್ಷ ಪೂವಪ್ಪ ಪೂಜಾರಿ ಕೊಡಿಪಾನ, ಪಡ್ಪು ದೈವಸ್ಥಾನದ ವ್ಯವಸ್ಥಾಪಕರಾದ ದಾಮೋದರ ಗೌಡ ಶೇಡಿಗುತ್ತು, ಸಂತೋಷ್ ಜೈನ್ ಬಾರಿಕೆಮನೆ, ಜನಸ್ಪಂದನ ಸಮಿತಿಯ ಸ್ಥಾಪಕ ಸದಸ್ಯ ಸಿದ್ದಪ್ಪ ನಾಯ್ಕ್ ಬೆದ್ರೋಡಿ, ಸಮಿತಿಯ ಮಾಜಿ ಅಧ್ಯಕ್ಷ ತಿಮ್ಮಪ್ಪ ಉಪಾತಿಪಾಲು, ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಧರ ಮುದ್ಯ, ಸಲಹೆಗಾರರಾದ ಸೋಮಸುಂದರ ಕೊಡಿಪಾನ, ಭಜನಾ ಸಮಿತಿಯ ಅಧ್ಯಕ್ಷ ನಾರಾಯಣ ನೀರಕಟ್ಟೆ, ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು, ಗ್ರಾಮ ವಿಕಾಸ ಸಂಘದ ಅಧ್ಯಕ್ಷ ದಯಾನಂದ ಆರಾಲು, ತುಳುನಾಡ್ ತುಡುರ್ ಗ್ರೂಪ್‌ನ ಅಧ್ಯಕ್ಷ ಮನೋಜ್ ನೀರಕಟ್ಟೆ, ಬಜತ್ತೂರು ಗ್ರಾ.ಪಂ.ಸದಸ್ಯ ಮಾಧವ ಒರುಂಬೋಡಿ, ಸಾಮಾಜಿಕ ಕಾರ್ಯಕರ್ತರಾದ ರವೀಂದ್ರ ಒರುಂಬೋಡಿ, ರುಕ್ಮಯ ಪುಯಿಲ ಕಾಂಚನ, ಮೋನಪ್ಪ ಪುಯಿಲ ಕಾಂಚನ, ವಸಂತ ಗೌಡ ಕಾಂಚನ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here