ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಇದರ ಮಂಗಳೂರು ವಿಭಾಗ ಅಧಿಕಾರಿ ಸವಿತಾ ಏರ್ಮಾಲ್ ಅಧಿಕೃತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಜೀವನ ಕೌಶಲಗಳನ್ನು ಬೆಳೆಸುತ್ತದೆ. ವಿವಿಧ ಚಟುವಟಿಕೆಗಳ ಮೂಲಕ ಜ್ಞಾನವನ್ನು ಪಡೆಯುವಂತಹ ವಿಶೇಷವಾದ ಕಲಿಕಾ ವಿಧಾನವನ್ನು ಇಲ್ಲಿ ಅನುಸರಿಸಲಾಗ್ತದೆ. ಹಾಗಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿಯಾಗುತ್ತದೆ” ಎನ್ನುತ್ತಾ ರಾಷ್ಟ್ರೀಯ ಸೇವಾ ಯೋಜನೆ ಯ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರು ಸಂದರ್ಭೋಚಿತವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ತಿಲಕಾಕ್ಷ ಸ್ವಾಗತಿಸಿ, ಸಹ ಯೋಜನಾಧಿಕಾರಿ ಕೀರ್ತನ್ ಧನ್ಯವಾದ ಸಮರ್ಪಿಸಿದರು. ಸಹಯೋಜನಾಧಿಕಾರಿ ತನುಜ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಎನ್ ಎಸ್ ಎಸ್ ಘಟಕದ ನಾಯಕ ಧನರಾಜ್ ಮತ್ತು ನಾಯಕಿ ಸಮೀಕ್ಷ ಉಪಸ್ಥಿತರಿದ್ದರು