ಪುತ್ತೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಇದರ 29ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಉರ್ವ ಸೆಂಟಿನರಿ ಚರ್ಚ್ಹಾಲ್ನಲ್ಲಿ ನಡೆಯಿತು.
2023 ಮಾರ್ಚ್ ವರ್ಷಾಂತ್ಯಕ್ಕೆ ಸಂಘವು ರೂ. 835 ಕೋಟಿ ಮೀರಿದ ಒಟ್ಟು ವ್ಯವಹಾರ, ರೂ. 9.84 ಕೋಟಿ ನಿವ್ವಳ ಲಾಭ ಹಾಗೂ ರೂ. 9089 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ. ಈ ಸಂದರ್ಭದಲ್ಲಿ ವ್ಯವಹಾರದ ಗುರಿಯನ್ನು ಸಾಧಿಸಿ ಸಾಧನೆ ತೋರಿದ ಶಾಖೆಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಮಗ್ರ ವ್ಯವಹಾರ ವಿಭಾಗದ 30 ಕೋಟಿ ಒಳಗಿನ ವ್ಯವಹಾರ ವಿಭಾಗದಲ್ಲಿ ಪುತ್ತೂರು ಶಾಖೆಯು ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಶಾಖಾ ಪ್ರಶಸ್ತಿ, ಪಡೆಯಿತು. ಈ ಪ್ರಶಸ್ತಿಯನ್ನು ಸಂಘದ ನಿರ್ದೇಶಕ ಹಾಗೂ ಪುತ್ತೂರು ಶಾಖೆಯ ಉಸ್ತುವಾರಿ ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು, ಸಂಘದ ನಿರ್ದೇಶಕ ಹಾಗೂ ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ಎ. ಚಿಕ್ಕಪ್ಪ ನಾಕ್ ಹಾಗೂ ಶಾಖಾ ವ್ಯವಸ್ಥಾಪಕ ಚಂದ್ರಹಾಸ ಶೆಟ್ಟಿಯವರಿಗೆ ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು, ಸಂಘದ ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಉಪಸ್ಥಿತರಿದ್ದರು.
ಶಾಖಾ ಸಲಹಾ ಸಮಿತಿಯ ಸದಸ್ಯರಿಂದ ಅಭಿನಂದನೆ:
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಪುತ್ತೂರು ಶಾಖೆಯ ಅತ್ಯುತ್ತಮ ಶಾಖಾ ಪ್ರಶಸ್ತಿ-2022-23 ಪಡೆದಿರುವ ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಹಾಗೂ ಉಸ್ತುವಾರಿ ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು, ನಿರ್ದೇಶಕ ಹಾಗೂ ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾದ ಎ. ಚಿಕ್ಕಪ್ಪ ನಾಕ್, ಶಾಖಾ ವ್ಯವಸ್ಥಾಪಕರಾದ ಚಂದ್ರಹಾಸ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರನ್ನು ಪುತ್ತೂರು ಶಾಖೆಯ ಸಲಹಾ ಸಮಿತಿ ಸದಸ್ಯರು ಅಭಿನಂದಿಸಿದರು. ಶಾಖಾ ಸಲಹಾ ಸಮಿತಿಯ ಸದಸ್ಯರಾದ ಎನ್. ಸುಂದರ ರೈ, ಸಂಜೀವ ಆಳ್ವ, ಕುಂಬ್ರ ದುರ್ಗಾಪ್ರಸಾದ್ ರೈ, ಜಯರಾಮ್ ರೈ ಎನ್., ಗಂಗಾಧರ ರೈ, ಉದಯಶಂಕರ್ ಶೆಟ್ಟಿ ಎ. ಇವರು ಉಪಸ್ಥಿತರಿದ್ದರು.