ಮಾಜಿ ಸಚಿವ ರಮಾನಾಥ ರೈ ಹುಟ್ಟು ಹಬ್ಬ ಆಚರಣೆ-ಅಶಕ್ತರಿಗೆ ವೀಲ್ ಚೇರ್ ವಿತರಣೆ

0

ನೀವು ಸೋತಾಗ ನಾವು ಗೆದ್ದಿದ್ದೇವೆ-ರಮಾನಾಥ ರೈ
ರಮಾನಾಥ ರೈ ಜಿಲ್ಲೆಯ ನಾಯಕತ್ವ ವಹಿಸಬೇಕು-ಹೇಮನಾಥ ಶೆಟ್ಟಿ ಕಾವು
ರಮಾನಾಥ ರೈಯವರ ರಾಜಕೀಯ ನಮಗೆ ಪ್ರೇರಣೆ-ಫಾರೂಕ್ ಬಾಯಬೆ


ಪುತ್ತೂರು:ನಮ್ಮಲ್ಲಿ ಕೆಲವು ಮುಖಂಡರು ನೀವು ಸೋತವರೆಂದು ಹೇಳುತ್ತಾರೆ.ಆದರೆ ನೀವು ಸೋತಾಗಲೂ ನಾವು ಇಲ್ಲಿ ಗೆದ್ದಿದ್ದೇವೆ,ಪಕ್ಷದ ಕೆಲವು ಮುಖಂಡರು ಇದನ್ನು ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.


ಮಾಜಿ ಸಚಿವ ಬಿ.ರಮಾನಾಥ ರೈ ಅಭಿಮಾನಿ ಬಳಗದಿಂದ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಸೆ.13ರಂದು, ರಮಾನಾಥ ರೈ ಅವರ ಹುಟ್ಟು ಹಬ್ಬದ ಸಲುವಾಗಿ ಅಶಕ್ತರಿಗೆ ವೀಲ್ ಚೇಯರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಎಲ್ಲಾ ಕಡೆ ಪಕ್ಷ ಸ್ಥಾನ ಕಳೆದುಕೊಂಡಿದ್ದಾಗಲೂ ಅವಿಭಜಿತ ದಕ್ಷಿಣ ಕನ್ನಡದ 8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿದೆ.ಆ ಹಿನೆಲ್ಲೆ ದಕ್ಷಿಣ ಕನ್ನಡದಲ್ಲಿದೆ.ಇದನ್ನು ರಾಜ್ಯದ ಕೆಲವು ಮುಖಂಡರು ತಿಳಿದು ಕೊಳ್ಳಬೇಕೆಂದು ರಮಾನಾಥ ರೈಯವರು ಹೇಳಿದರು.ಮುಂದಿನ ದಿನ ನಿಮಗೂ ಉತ್ತಮ ಅವಕಾಶವಿದೆ.ಉತ್ತಮ ರಾಜಕಾರಣ ಮಾಡಿ ಎಂದು ಹೇಳಿದ ಅವರು ಈ ಭಾಗದ ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ ಉತ್ತಮ ನಾಯಕತ್ವ ಸಿಗಲಿ.ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಮಗೆ ಸ್ವಲ್ಪ ಇಟ್ಟು ಕೊಂಡು ಸಮಾಜಕ್ಕೆ ಸರ್ವಸ್ವ ಸೇವೆ ನೀಡಿ ಎಂದರು.


ಕೇಕ್ ಕಟ್ ಮಾಡಿ, ವೀಲ್ ಚಯರ್ ವಿತರಣೆ: ಹುಟ್ಟು ಹಬ್ಬ ಆಚರಿಸಿಕೊಂಡ ರಮಾನಾಥ ರೈ ಅವರಿಗೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಮಾಲಾರ್ಪಣೆ ಮಾಡಿದರು.ಕಾರ್ಯಕರ್ತರು ಹೂಗುಚ್ಛ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ರಮಾನಾಥ ರೈ ಅವರು ಕೇಕ್ ಕಟ್ ಮಾಡಿ ಬಳಿಕ ಅಶಕ್ತ ಐವರಿಗೆ ವೀಲ್ ಚಯರ್ ಹಸ್ತಾಂತರ ಮಾಡಿದರು.


ರಮಾನಾಥ ರೈ ಅವರು ಜಿಲ್ಲೆಯ ನಾಯಕತ್ವ ವಹಿಸಬೇಕು: ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಕೆಲ ದಿನಗಳ ಹಿಂದೆ ನಿಧನರಾದ ಸುಧಾಕರ ಶೆಟ್ಟಿಯವರು ಧಾರ್ಮಿಕ ಮತ್ತು ರಾಜಕೀಯವಾಗಿ ಹಲವು ಕೆಲಸ ಮಾಡಿದವರು.ರಮಾನಾಥ ರೈಯವರು ಬಂಟ್ವಾಳದಲ್ಲಿ 6 ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾದವರು.ರಾಜಕಾರಣಿ ಸಮಾಜ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ತೋರಿಸಿ ಕೊಟ್ಟವರು.ಇವತ್ತು ರಮಾನಾಥ ರೈ ಅವರಿಗೆ ಸರಿಸಾಟಿ ಯಾರೂ ಇಲ್ಲ. ಯಾಕೆಂದರೆ ಯಾವುದೇ ಆಪಾದನೆಗೆ ಅವಕಾಶಕೊಡದೆ, ಯಾವುದೇ ಭ್ರಷ್ಟಾಚಾರ ಇಲ್ಲದೆ ರಾಜಕಾರಣ ಮಾಡಿದ ರಮಾನಾಥ ರೈ ಅವರು ಸೋತರೂ ನಮಗೆ ಅವರೇ ನಾಯಕ.ಅವರಿಗೆ ಅವಕಾಶವಿದ್ದಾಗ ರಾಜ್ಯದ ಅತ್ಯುತ್ತಮ ಅಧಿಕಾರ ಪಡೆಯದಿರುವುದು ನಮಗೆ ಬೇಸರವಿದೆ.ಯಾಕೆಂದರೆ ಅವರು ಅಧಿಕಾರ ಪಡೆಯದಿರುವುದರಿಂದ ಜಿಲ್ಲೆಗೆ ನಷ್ಟವಾಗಿದೆ.ಈ ನಿಟ್ಟಿನಲ್ಲಿ ಮುಂದಿನ ದಿನವಾದರೂ ರಮಾನಾಥ ರೈ ಅವರು ಜಿಲ್ಲೆಯ ನಾಯಕತ್ವ ವಹಿಸಬೇಕು ಎಂದು ಹೇಳಿ ಅಭಿನಂದಿಸಿದರು.


ರಮಾನಾಥ ರೈಯವರ ರಾಜಕೀಯ ನಮಗೆ ಪ್ರೇರಣೆ: ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 4 ವರ್ಷಗಳಿಂದ ರಮಾನಾಥ ರೈಯವರ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ.ಈ ಬಾರಿ ಅಶಕ್ತ ಕುಟುಂಬಗಳಿಗೆ ವೀಲ್ ಚಯರ್ ನೀಡುವ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ರಮಾನಾಥ ರೈ ಅವರ ರಾಜಕೀಯ ನಮಗೆಲ್ಲ ಪ್ರೇರಣೆ.ಅವರಿಂದಾಗಿ ನಾವೆಲ್ಲ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಮುಂದೆಯೂ ರಮಾನಾಥ ರೈ ಅವರಿಗೋಸ್ಕರ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಸಂಕಲ್ಪ ಹಾಕಿಕೊಂಡಿದ್ದೇವೆ ಎಂದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರ ಟಿ.ಎಮ್ ಶಹೀದ್, ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ಸೊರಕೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮಾಜಿ ಪುರಸಭೆ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಬ್ಲಾಕ್ ಯೂತ್ ಅಧಕ್ಷ ಶ್ರೀಪ್ರಸಾದ್ ಪಾಣಾಜೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯೂತ್ ಅಧ್ಯಕ್ಷ ಫಾರೂಕ್ ಪೆರ್ನೆ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಡಾ.ರಘು ಬೆಳ್ಳಿಪ್ಪಾಡಿ, ನ್ಯಾಯವಾದಿ ಎಂ ಪಿ ಅಬೂಬಕ್ಕರ್ ಉಪಸ್ಥಿತರಿದ್ದರು.ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


ವಿಸಿಟಿಂಗ್ ಕಾರ್ಡ್ ಇಲ್ಲದ ಪ್ರೀತಿಯ ಕಾರ್ಯಕರ್ತರು
ಪುತ್ತೂರು ನನ್ನ ಕುಟುಂಬದ ಊರು.ಇಲ್ಲಿ ನನ್ನ ರಾಜಕೀಯ ಕ್ಷೇತ್ರವಲ್ಲ. ಜನರ ಜೊತೆಯಿದ್ದು ರಾಜಕೀಯವಾಗಿರಬೇಕು.ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಒಳ್ಳೆಯ ಕಾರ್ಯಕರ್ತರನ್ನು ಸೃಷ್ಟಿ ಮಾಡಿದೆ. ಯಾಕೆಂದರೆ ಈ ಭಾಗದ ಜನರ ಪ್ರೀತಿ ವಿಶ್ವಾಸ ನನ್ನಲ್ಲಿದೆ.ಈ ಭಾಗದಲ್ಲಿ ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡಲ್ಲ ಪ್ರೀತಿ ವಿಶ್ವಾಸದ ಕಾರ್ಯಕರ್ತರಿಂದ ನನಗೆ ಅಭಿಮಾನವಿದೆ-
ಬಿ.ರಮಾನಾಥ ರೈ ಮಾಜಿ ಸಚಿವ


ಎನ್.ಸುಧಾಕರ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ
ಕೆಲ ದಿನಗಳ ಹಿಂದೆ ನಿಧನರಾದ ಕಾಂಗ್ರೆಸ್‌ನ ಹಿರಿಯ ನಾಯಕ ಎನ್.ಸುಧಾಕರ್ ಶೆಟ್ಟಿಯವರ ಭಾವ ಚಿತ್ರದ ಎದುರು ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾಂಗ್ರೆಸ್ ಮುಖಂಡ ಇಸಾಕ್ ಸಾಲ್ಮರ ಅವರು ನುಡಿನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here