





ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ಸೋಮವಾರಪೇಟೆ ಪುಷ್ಪಗಿರಿ ವನ್ಯಜೀವಿ ವಲಯಾರಣ್ಯಾಧಿಕಾರಿಯಾಗಿದ್ದ ವಿಮಲ್ ಬಾಬು ಎಂಬವರು ಕರ್ತವ್ಯಕ್ಕೆ ಹಾಜರಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವ ರಾಘವೇಂದ್ರ ಹೆಚ್.ಪಿ. ಯವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.



ಅವರ ಸ್ಥಾನಕ್ಕೆ ಸೋಮವಾರಪೇಟೆ ಪುಷ್ಪಗಿರಿ ವನ್ಯಜೀವಿ ವಲಯಾರಣ್ಯಾಧಿಕಾರಿಯಾಗಿದ್ದ ವಿಮಲ್ ಬಾಬು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.










