ಪುತ್ತೂರು:sಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.17 ರಂದು ಸಂಘದ ಅಧ್ಯಕ್ಷರಾದ ಇ.ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ದರ್ಬೆ ಸಣ್ಣ ಕೈಗಾರಿಕಾ ಸಹಕಾರಿ ಕಟ್ಟಡದ ಸಭಾಭವನದಲ್ಲಿ ಜರಗಲಿದೆ. ಸಂಘದ ಸದಸ್ಯರು ಸಭೆಯಲ್ಲಿ ಹಾಜರಾಗಬೇಕು ಎಂದು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.