ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆ.15ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಉಪಾಧ್ಯಕ್ಷ ಜಯಪ್ರಕಾಶ್ ಬದಿ ನಾರು, ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಜಗನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಯತೀಶ ಶೆಟ್ಟಿ ಬರಮೇಲು, ಮೋಹಿನಿ ಜನಾರ್ದನ ಗೌಡ ಕೋಡಿ, ವಿಶ್ವನಾಥ ಕೃಷ್ಣಗಿರಿ, ಪುಷ್ಪಾ ಲೋಕಯ್ಯ ನಾಯ್ಕ ಕಠಾರ, ಶಾಂತಿನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮೀನಾಕ್ಷಿ, ಪಂಚಾಯತ್ ಸಿಬ್ಬಂದಿಗಳಾದ ಲೀಲಾವತಿ, ಕುಸುಮ, ರೀತಾ, ಕಾವ್ಯ, ಸುರೇಶ, ಸುರೇಶ ನಾಯ್ಕ್ ಕಿನ್ನೆತ್ತಿಪಳಿಕೆ ಉಪಸ್ಥಿತರಿದ್ದರು. ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ಸ್ವಾಗತಿಸಿದರು.