ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟಾವಿಗೆ ಮುಹೂರ್ತ

0

ಪುತ್ತೂರು: ಕೃಷಿ ಪ್ರಧಾನ ದೇಶವಾಗಿರುವ ನಮ್ಮ ದೇಶದಲ್ಲೇ ಕೃಷಿಯೇ ನಮ್ಮ ಬೆನ್ನೆಲುಬು, ರೈತ ಶ್ರಮ ಪಟ್ಟು ದುಡಿದರೆ ಮಾತ್ರ ನಾವು ಬದುಕಲು ಸಾಧ್ಯ. ರೈತನು ತನ್ನ ಬದುಕಿನಲ್ಲಿ ಕದಿರು ಕಟ್ಟುವ ಹಬ್ಬವನ್ನು ಯುಗ ಯುಗಗಳಿಂದ ಅಚರಿಸಿಕೊಂಡು ಬಂದ ಸಂಪ್ರದಾಯ ಅದುವೇ ಕೃಷಿಕನ ವಾರ್ಷಿಕ ಹಬ್ಬ ಕದಿರು ಕಟ್ಟುವುದು. ಈ ಸಂಪ್ರದಾಯವನ್ನು ಧಾರ್ಮಿಕ ಕ್ಷೇತ್ರಗಳಲ್ಲೂ ಅಚರಣೆಯಲ್ಲಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.17ರಂದು ನಡೆಯುವ ಕದಿರು ವಿನಿಯೋಗಕ್ಕೆ ಸೆ.16ರ ಬೆಳಿಗ್ಗೆ ಕದಿರು ಕಟಾವು ಮುಹೂರ್ತ ನಡೆಯಿತು.


ದೇವಳದ ದೇವರ ಮಾರು ಗದ್ದೆಯಲ್ಲಿರುವ ಮೂಲನಾಗನ ಸನ್ನಿಧಿಯ ಬಳಿಯಲ್ಲಿ ಬೆಳೆದ ಭತ್ತದ ಪೈರನ್ನು ಕಟಾವು ಮಾಡುವ ಮುಹೂರ್ತಕ್ಕೆ ದೇವಳದ ಅರ್ಚಕ ಪ್ರಕಾಶ್ ಭಟ್ ಅವರು ಪ್ರಾರ್ಥನೆ ಮಾಡಿದರು. ಚಿಕ್ಕಪುತ್ತೂರಿನ ಸುದೇಶ ಕುಮಾರ್ ಅವರು ಭತ್ತದ ಪೈರಿಗೆ ಹಾಲು ಎರೆದು ಕಟಾವು ಮಾಡುವ ಮೂಲಕ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ಕಚೇರಿ ವ್ಯವಸ್ಥಪಕ ಹರೀಶ್ ಶೆಟ್ಟಿ, ಪದ್ಮನಾಭ ಸಹಿತ ದೇವಳದ ನೌಕರರು ಉಪಸ್ಥತರಿದ್ದರು. ನೌಕರರು ಬಳಿಕ ಪೈರನ್ನು ಕಟಾವು ಮಾಡಿದರು.

LEAVE A REPLY

Please enter your comment!
Please enter your name here